

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಜಯವಾಣಿ ದಿನಪತ್ರಿಕೆ ಈಗಾಗಲೇ ನಾಡಿನಾದ್ಯಂತ ಛಾಪು ಮೂಡಿಸಿದೆ. ಪತ್ರಿಕೆಯಿಂದ `ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ' ವಿದ್ಯಾರ್ಥಿಗಳಿಗಾಗಿ ಹೊರತರಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಯಶಸ್ಸು ಗಳಿಸಬೇಕು ಎಂದು ಯು.ಕೆ. ಪ್ರಾಪರ್ಟಿಸ್ ಪಾಲುದಾರ ಜಯದೇವ ಹಿರೇಮಠ ಹೇಳಿದರು.
ನಗರದ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ- ಉದ್ಯೋಗ ಮಿತ್ರ' ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳೇ ಭವ್ಯ ಭಾರತದ ಪ್ರತಿನಿಧಿಗಳು. ವಿದ್ಯಾರ್ಥಿಮಿತ್ರ ಕೇವಲ 1 ರೂಪಾಯಿಯಲ್ಲಿ ಸಿಗುತ್ತಿದ್ದು, ಅದರ ಹಿಂದೆ ಹಲವರ ಶ್ರಮ ಇದೆ. ಜ್ಞಾನದ ಆಗರವಾಗಿರುವ ಪತ್ರಿಕೆಯನ್ನು ನಿತ್ಯವೂ ಓದಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ ಶಾಲೆಗೆ ಕೀರ್ತಿ ತರಬೇಕು ಎಂದರು.
ಆದರ್ಶ ವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಅಶೋಕ ಡೊಂಬರಕೊಪ್ಪ ಮಾತನಾಡಿ, ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಾಗ ಅನೇಕ ಸಾಧಕ ವಿದ್ಯಾರ್ಥಿಗಳು ವಿದ್ಯಾರ್ಥಿಮಿತ್ರ ಓದಿದ್ದನ್ನು ಸ್ಮರಿಸುತ್ತಾರೆ. ಪಠ್ಯಕ್ರಮಕ್ಕೆ ಅನುಸಾರ ಪ್ರತಿದಿನವೂ ಪ್ರಕಟಗೊಳ್ಳುವ ವಿಷಯಗಳನ್ನು ಓದಿ ಮನದಟ್ಟು ಮಾಡಿಕೊಳ್ಳಬೇಕು. ನಿಮ್ಮ ಯಶಸ್ಸೇ ಪತ್ರಿಕೆಗೆ ಸಲ್ಲುವ ಅಭಿನಂದನೆ ಎಂದರು.
ವಿಜಯವಾಣಿ ಧಾರವಾಡ ಹಿರಿಯ ವರದಿಗಾರ ಮಂಜುನಾಥ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಹೀರಾತು ವಿಭಾಗದ ಪ್ರತಿನಿಽ ಶಿವಕುಮಾರ ಕೆರೂರ, ಪ್ರಸರಣ ವಿಭಾಗದ ಪ್ರತಿನಿಽ ಸಿದ್ದನಗೌಡ ಗೌಡ್ರ ವೇದಿಕೆಯಲ್ಲಿದ್ದರು. ಶಿಕ್ಷಕ ಗಂಗಾಧರಯ್ಯ ಹಿರೇಮಠ ಸ್ವಾಗತಿಸಿ ವಂದಿಸಿದರು.