ಮನಸ್ಸು ಹದಗೊಳಿಸುವ ಓದು,  ಸಂತೋಷ ದಂಡಗಲ್ಲ ಅಭಿಮತ

IMG_20250909_203340_234.jpg
Published on

ಹುಬ್ಬಳ್ಳಿ: ಮಾನವನ ಬದುಕಿನಲ್ಲಿ ಓದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ, ಚಿಂತನೆ ಶಕ್ತಿಯನ್ನು ವಿಸ್ತರಿಸುತ್ತದೆ ಹಾಗೂ ವ್ಯಕ್ತಿತ್ವ ಬೆಳೆಸುತ್ತದೆ ಎಂದು ಗ್ರಾಮೀಣ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ದಂಡಗಲ್ಲ ಹೇಳಿದರು.

ತಾಲೂಕಿನ ಕುಸುಗಲ್ಲ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಓದು ಕರ್ನಾಟಕ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.

ಪುಸ್ತಕಗಳು ಮಾನವನ ಶ್ರೇಷ್ಠ ಗೆಳೆಯರು. ಅವು ನಮ್ಮ ಬದುಕಿಗೆ ಬೆಳಕು ನೀಡುತ್ತವೆ. ಒಳ್ಳೆಯ ಪುಸ್ತಕಗಳು ನೈತಿಕ ಮೌಲ್ಯಗಳು, ಶಿಸ್ತು, ಶ್ರಮ ಮತ್ತು ತಾಳ್ಮೆ ಇವುಗಳನ್ನು ಕಲಿಸುತ್ತವೆ ಎಂದರು.

ಗ್ರಂಥಾಲಯ ವಿಭಾಗದ ಸಂಚಾಲಕಿ ಅಮೀರಾಬಾನು ದಲಾಲ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಮುಖ್ಯೋಪಾಧ್ಯಾಯ ಐ.ಎಂ. ಇಳಕಲ್ಲ ಮಾತನಾಡಿ, ತಂತ್ರಜ್ಞಾನ ಎಷ್ಟೇ ಬೆಳೆದರೂ ಓದಿನ ಮಹತ್ವ ಕಡಿಮೆಯಾಗಿಲ್ಲ. ಅಂತರ್ಜಾಲ, ಇ-ಪುಸ್ತಕಗಳು, ಆಡಿಯೋ ಬುಕ್ಸ್ ಇತ್ಯಾದಿಗಳ ಮೂಲಕ ಓದಿನ ಪ್ರಪಂಚ ಇನ್ನಷ್ಟು ವಿಶಾಲವಾಗಿದೆ. ನಿರಂತರ ಓದು ಜೀವನದ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ವಿಜ್ಞಾನ ಶಿಕ್ಷಕ ಸಂಜೀವಕುಮಾರ ಭೂಶೆಟ್ಟಿ, ಓದು ಬದುಕನ್ನು ರೂಪಿಸುವ ಶಕ್ತಿ ಹೊಂದಿದೆ. ಓದು ನಮ್ಮ ಶ್ರೇಷ್ಠ ಗೆಳೆಯ, ಗುರು ಹಾಗೂ ಮಾರ್ಗದರ್ಶಿ ಎಂದರು.

ಶಿಕ್ಷಕರಾದ ಗುರುನಾಥ ಬರದೇಲಿ, ಪ್ರೀತಾ ಫರ್ನಾಂಡಿಸ್, ಪ್ರಭಾಕರ ಪತ್ತಾರ, ಲೋಕೇಶ ಡಿ, ಸುಮಂಗಲಾ ಉಪಸ್ಥಿತರಿದ್ದರು.
ಸುರೇಶ ನಾಯ್ಕ ನಿರೂಪಿಸಿದರು, ಭಾನುಮತಿ ಅಡಗಲ್ಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net