ಪರೀಕ್ಷೆಗಾಗಿ ಅಲ್ಲ ಜ್ಞಾನಕ್ಕಾಗಿ ಓದಿ

blm
Published on

ಕಾರ್ಕಳ: ಇಂದು ಓದುವ ವಿಧಾನ ಬದಲಾಗಿದ್ದು ವಿದ್ಯಾರ್ಥಿಗಳಿಗೆ ಓದಿದ ವಿಷಯಗಳು ಮರೆತು ಹೋಗುತ್ತಿದೆ. ಕೇವಲ ಪರೀಕ್ಷೆಗೋಸ್ಕರ ಓದದೆ ಜ್ಞಾನಕ್ಕಾಗಿ ಓದುವಂತವರಾಗಬೇಕು. ಆಗ ವಾತ್ರ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ ಎಂದು ತರಬೇತುದಾರ ಕೆ.ರಾಜೇಂದ್ರ ಭಟ್ ಹೇಳಿದರು.

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕ್ರಿಯೇಟಿವ್ ಸ್ಫೂರ್ತಿ ವಾತು ಸರಣಿ ಕಾರ್ಯಕ್ರಮದ 9ನೇ ಆವೃತ್ತಿಯ ‘ಕಲಿಯುವುದು ಒಂದು ಹಬ್ಬ ಸಂಭ್ರಮಿಸೋಣ’ ಎಂಬ ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ವಾತನಾಡಿದರು.

ಎಲ್ಲ ಮಕ್ಕಳು ಅದ್ಭುತವನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ. ಸ್ಮಾರ್ಟ್ ವರ್ಕ್ ವಾಡಿದರೆ ಯಾವುದೇ ವಿಷಯಗಳು ಕಠಿಣವೆನಿಸುವುದಿಲ್ಲ ಕಡಿಮೆ ಪರಿಶ್ರಮ ಹಾಕಿ, ಆಸಕ್ತಿಯಿಂದ ಕೆಲಸ ವಾಡುವುದೇ ಸ್ಮಾರ್ಟ್ ವರ್ಕ್ ಎಂದರು.

ಸಹ ಸಂಸ್ಥಾಪಕ ಅಶ್ವತ್ ಎಲ್., ವಿದ್ಯಾರ್ಥಿಗಳು, ಉಪನ್ಯಾಸಕರು, ನಿಲಯ ಪಾಲಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಪ್ರಿಯಾಂಕಾ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net