

ಧಾರವಾಡ: ಬದುಕಿನಲ್ಲಿ ಕಷ್ಟಗಳು ಬಂದಲ್ಲಿ ಅವುಗಳಿಗೆ ಜಗ್ಗದೇ ಗುರಿ ಮುಟ್ಟಬೇಕು. ಸಾಧನೆಯ ಮಾರ್ಗದಲ್ಲಿ ವಿಫಲತೆಗಳು ಸಹಜ. ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಸತತವಾಗಿ ಮರು ಯತ್ನ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹು-ಧಾ ಮಹಾನಗರ ಪಾಲಿಕೆ ಸಹಾಯಕ ಆಯುಕ್ತೆ ಭಾಗ್ಯಶ್ರೀ ಹುಗ್ಗಿ ಹೇಳಿದರು.
ನಗರದ ದೇವಾಂಗ ವಿದ್ಯಾರ್ಥಿ ನಿಲಯದ ಎನ್.ಆರ್.ಹುಲಮನಿ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯರ ಸನ್ಮಾನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ನೇಕಾರ ವೃತ್ತಿಯನ್ನೇ ಆಧರಿಸಿದ ಕುಟುಂಬಗಳು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದು, ಬಡತನದಲ್ಲೇ ಬದುಕುತ್ತಿದ್ದಾರೆ. ಅವರನ್ನು ಮುನ್ನೆಲೆಗೆ ತರುವುದಕ್ಕೆ ಸಮುದಾಯದ ಮುಖಂಡರಿಂದ ಹೆಚ್ಚಿನ ಪ್ರಯತ್ನಗಳಾಗಬೇಕಿದೆ ಎಂದರು.
ಸಾಹಿತಿ, ವಿಮರ್ಶಕ ಶ್ರೀಧರ ಹೆಗಡೆ ಭದ್ರನ್ ಮಾತನಾಡಿ, ಕುಲದೇವತೆಯಾಗಿ ಯಾವ ಜನಾಂಗವು ಸೀ ದೇವತೆ ಪಡೆದಿದೆಯೋ ಅಂತಹ ಜನಾಂಗಗಳು ಪ್ರಾಚೀನ ಇತಿಹಾಸ ಹೊಂದಿರುತ್ತವೆ. ಕುಲದೇವತೆ ಬನಶಂಕರಿ, ಶಾಖಂಬರಿ, ಚೌಡೇಶ್ವರಿ ಮುಂತಾಗಿ ಕರೆವ ದೇವತೆಯ ಆರಾಧಕರಾದ ದೇವಾಂಗರ ಮೂಲ ಗುರು ದೇವಲ ಮರ್ಷಿ. ದೇವಲ ಮಹರ್ಷಿ ಪುರಾಣದಿಂದ ನಮಗೆ ದೇವತೆಗಳಾದಿಯಾಗಿ ಸಕಲ ಜಗಕ್ಕೆ ವಸ ನೀಡಿ ಜಗದ ಮಾನ ಕಾಪಾಡಿದ್ದು ಗೊತ್ತು. ಆದರೆ ಅದೇ ಜನಾಂಗದ ಚರಿತ್ರೆ ಇಂದು ನಮಗೆ ಕಾಣದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀಕಾಂತ ಇಟ್ನಾಳ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲೆಯ ಒಳಗಡೆಯ ವಿದ್ಯೆಯಷ್ಟೇ ಅಲ್ಲದೆ ಹೊರಗಿನ ಜಗತ್ತಿನ ವಿಭಿನ್ನ ಕೌಶಲ ಕಲಿತರೆ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಇದೇ ವೇಳೆ 75 ವಸಂತ ಪೂರೈಸಿದ ವಿರುಪಾಕ್ಷಪ್ಪ ಗೋಸಿ, ಜಿ.ಐ. ಸೋಗಿ, ಎಂ.ಕುದರಿ ಹಾಗೂ ಪ್ರತಿಮಾ ಬ್ಯಾಡಗಿ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ಡಾ.ಗುರುರಾಜ ಗಾಡದ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಧಾ ಗೌಡರ, ನಾರಾಯಣ ಚಳಗೇರಿ, ಡಾ.ಗುರುರಾಜ ಗಾಡದ, ಶಕ್ತಿ ಮಹಿಳಾ ಮಂಡಳಿ ಸದಸ್ಯರಾದ ಸುಮಾ ಬ್ಯಾಡಗಿ, ಗೀತಾ ಹೊನ್ನಳ್ಳಿ, ಬಸವರಾಜ ಬ್ಯಾಡಗಿ, ವಿಶ್ವನಾಥ ಕೊಳದೂರ, ಜ್ಯೋತಿ ಮ್ಯಾಗೋಟಿ, ಪೂರ್ಣಿಮಾ ಗೌರೋಜಿ, ಸುನೀಲ ಹೊನ್ನುಂಗರ, ಆದಪ್ಪ ಹೆಂಬಾ, ಭಾರತಿ ಹೆಂಬಾ ಇದ್ದರು. ಬಸವರಾಜ ಬೋರಣ್ಣವರ ಸ್ವಾಗತಿಸಿದರು. ರವಿ ಹೊನ್ನಳ್ಳಿ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.