ಸರ್ಕಾರದ ವೈಫಲ್ಯ ಜನರಿಗೆ ಮುಟ್ಟಿಸಿ: ಬಿ.ಎಂ.ಸಂದೀಪ್

Cong. Prog.
Published on

ಚಿಕ್ಕಮಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಹಳ್ಳಿ, ಪಟ್ಟಣ, ನಗರ ಪ್ರದೇಶಗಳಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಯುವಜನರಿಂದಾಗಬೇಕು ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದರು. ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಆರು ತಿಂಗಳು 6 ಸಾವಿರ ಕಿ.ಮೀ. ಪಾದಯಾತ್ರೆ ನಡೆಸುತ್ತಿರುವ ಬಾಗಲಕೋಟೆ ನಾಗರಾಜ್ ಅವರನ್ನು ನಗರದಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ಸ್ವಾಗತಿಸಿ ಮಾತನಾಡಿದರು.

ಸರ್ಕಾರದ ವಿರುದ್ಧ ಧ್ವನಿ ಇಲ್ಲದಾದರು:

ಅಣ್ಣಾ ಹಜಾರೆ, ಬಾಬಾರಾಮ್ ದೇವ್ ಈ ಹಿಂದೆ ಆರ್‍ಎಸ್‍ಎಸ್ ಮತ್ತು ಬಿಜೆಪಿ ಬೆಂಬಲದೊಂದಿಗೆ ಯುಪಿಎ ಸರ್ಕಾರದ ವಿರುದ್ಧ ದೊಡ್ಡ ಆಂದೋಲನವನ್ನೇ ನಡೆಸಿದರು. ಇಂದು ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿರುವ ಸರ್ಕಾರದ ವಿರುದ್ಧ ಅವರ ಧ್ವನಿ ಇಲ್ಲದಂತಾಗಿದೆ. ಈ ವಾಸ್ತವ ಸಂಗತಿ ಜನರಿಗೆ ತಿಳಿಸುವ ಕೆಲಸ ಯುವಜನರಿಂದಾಗಬೇಕು. ಜನರನ್ನು ಜಾಗೃತರನ್ನಾಗಿಸದಿದ್ದರೆ ಕೇಂದ್ರ ಸರ್ಕಾರ ದೇಶವನ್ನು ಇನ್ನಷ್ಟು ಹಾಳು ಮಾಡುತ್ತದೆ ಎಂದರು.

ದುರಾಡಳಿತದಿಂದ ಜನರಲ್ಲಿ ನೋವು:

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ದುರಾಡಳಿತದಿಂದ ಜನರು ನೋವು ಅನುಭವಿಸುತ್ತಿದ್ದಾರೆ. ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲು ಪಾದಯಾತ್ರೆಯಲ್ಲಿ ದೆಹಲಿಗೆ ತೆರಳುತ್ತಿರುವ ನಾಗರಾಜ್ ಅವರನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದರು. ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಕಿಸಾನ್ ಘಟಕ ಅಧ್ಯಕ್ಷ ಅರೇನಹಳ್ಳಿ ಪ್ರಕಾಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್, ವಿನಾಯಕ, ಶಿವಕುಮಾರ್, ರಾಹಿಲ್ ಶರೀಫ್, ಪ್ರಶಾಂತ್, ತರೀಕೆರೆ ಮಂಜುನಾಥ್, ಪದ್ಮನಾಭ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net