ಕೊಬ್ಬರಿ ಖರೀದಿಗೆ ಮರು ನೋಂದಣಿಗೆ ಆರಂಭ

1KDR1 (1)
ಕಡೂರಿನ ಎಪಿಎಂಸಿ ಕಚೇರಿ ಸಮೀಪ ಕೊಬ್ಬರಿ ನೋಂದಣಿ ಪ್ರಕ್ರಿಯೆಗೆ ಸಿದ್ದವಾಗಿರುವ ಕೇಂದ್ರ.
Published on

ಕಡೂರು: ನಾೆಡ್‌ನಿಂದ ಕೊಬ್ಬರಿ ಖರೀದಿಗೆ ಆರಂಭದಲ್ಲಿ ರೈತರ ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದ ಹಿನ್ನಲೆಯಲ್ಲಿ ಸರ್ಕಾರ ನೋಂದಣಿ ಪ್ರಕ್ರಿಯೆ ರದ್ದುಪಡಿಸಿ ಮರು ನೋಂದಣಿಗೆ ಅವಕಾಶ ಕಲ್ಪಿಸಿದ್ದು, ಮಾ.4ರಿಂದ ಮರು ನೋಂದಣಿಗೆ ಚಾಲನೆ ಸಿಗಲಿದೆ.
ಕೊಬ್ಬರಿ ಖರೀದಿ ನೋಂದಣಿಗೆ ಬಳಸುವ ಸ್ಟಾವೇರ್‌ನ್ನು ಎನ್‌ಐಸಿ ಸಂಸ್ಥೆ ನೂತನವಾಗಿ ಸಿದ್ದಪಡಿಸಿದ್ದು, ಒಂದು ಕಂಪ್ಯೂಟರ್‌ಗೆ ಬಳಸುವ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಇನ್ನೊಂದು ಕಂಪ್ಯೂಟರ್‌ನಲ್ಲಿ ಬಳಸಲು ಬಾರದಂತೆ ಲಾಕ್ ಮಾಡಲಾಗುತ್ತಿದೆ. ಇದಲ್ಲದೆ ಒಮ್ಮೆ ಒಂದು ಕಂಪ್ಯೂಟರ್‌ನಲ್ಲಿ ಲಾಗಿನ್ ಆದರೆ ಖರೀದಿ ಅಧಿಕಾರಿ ಮೊಬೈಲ್‌ಗೆ ಒಟಿಪಿ ಬರಲಿದೆ. ಇದರಿಂದ ಬಹುತೇಕ ಅಕ್ರಮ ತಡೆಗಟ್ಟಿದಂತಾಗಲಿದೆ.
ಹೊಸ ಸ್ಟಾವೇರ್‌ನಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಒಂದು ಜಿಲ್ಲೆಯ ರೈತ ಇನ್ನೊಂದು ಜಿಲ್ಲೆಗೆ ಹೋಗಿ ನೋಂದಣಿ ಮಾಡಿಸಲು ಸಾಧ್ಯವಾಗುವುದಿಲ್ಲ. ಆದರೆ ಒಂದೇ ಜಿಲ್ಲೆಯಲ್ಲಿ ಯಾವುದೇ ತಾಲೂಕಿನಲ್ಲಿ ಬೇಕಾದರೂ ನೋಂದಣಿ ಮಾಡಿಸಿಕೊಳ್ಳ ಬಹುದಾಗಿದೆ. ನೋಂದಣಿ ಮಿತಿ ಪ್ರತಿ ರೈತರಿಗೆ 20 ರಿಂದ 15 ಕ್ವಿಂಟಾಲ್‌ಗೆ ಬದಲಾಯಿಸಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಚಿಕ್ಕಮಗಳೂರು, ಕಡೂರು, ಬೀರೂರು, ಪಂಚನಹಳ್ಳಿ, ಅಜ್ಜಂಪುರ ಹಾಗೂ ತರೀಕೆರೆ ಎಪಿಎಂಸಿ ಕೇಂದ್ರಗಳಲ್ಲಿ ಕಂಪ್ಯೂಟರ್, ಪ್ರಿಂಟರ್ ಸ್ಕಾೃನರ್, ಡಾಂಗಲ್, ಸ್ಟೇಷನರಿಗಳನ್ನು ಸಿದ್ದಪಡಿಸಲಾಗುತ್ತಿದೆ.
ಕಡೂರು ಎಪಿಎಂಸಿ ಕೇಂದ್ರದ ಪ್ರಾರಂಭದಲ್ಲಿ 2100 ರೈತರಿಂದ 32,200 ಕ್ವಿಂಟಾಲ್‌ನಷ್ಟು ಕೊಬ್ಬರಿ ಖರೀದಿ ನೋಂದಣಿಯಾಗಿತ್ತು. ಇದೀಗ ಸರ್ಕಾರ ಹೊಸದಾಗಿ ಸ್ಟಾವೇರ್ ಅಳವಡಿಸಿರು ಹಿನ್ನಲೆಯಲ್ಲಿ ಹೊಸ ನೋಂದಣಿಗೆ ಅವಕಾಶ ನೀಡಿದೆ. ಮಾ.4ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸಿಬ್ಬಂದಿಗಳಿಗೆ ಹೊಸ ಸ್ಟಾವೇರ್‌ನಲ್ಲಿನ ಮಾಹಿತಿ ಬಗ್ಗೆ ಅಗತ್ಯ ತರಬೇತಿ ನೀಡಲಾಗಿದ್ದು, ರೈತರು ತಮ್ಮ ಆಧಾರ್‌ನೊಂದಿಗೆ ಎ್ಐಡಿ ಸಂಖ್ಯೆಯ ಮಾಹಿತಿ ನೀಡಿ ನೊಂದಣಿ ಮಾಡಿಸಿಕೊಳ್ಳಬೇಕಿದೆ ಎಂದು ಕೊಬ್ಬರಿ ಖರೀದಿ ಕೇಂದ್ರದ ಹಿರಿಯ ಸಹಾಯಕ ಅಧಿಕಾರಿ ಎ.ರಾಘವೇಂದ್ರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net