ದತ್ತ ಮಂದಿರದಲ್ಲಿ ದೇವರ ಮರು ಪ್ರತಿಷ್ಠೆ

14 ylp 02 (pratishte)
Published on

ಯಲ್ಲಾಪುರ ಪಟ್ಟಣದ ನಾಯಕನಕೆರೆ ದತ್ತ ಮಂದಿರದಲ್ಲಿ ದೇವರ ಮರು ಪ್ರತಿಷ್ಠೆ ಶನಿವಾರ ನಡೆಯಿತು.

ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ದೇವರ ಮರು ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠೆ ನೆರವೇರಿಸಿದರು.

ಗಣಪತಿ ಪೂಜೆ, ಪುಣ್ಯಾಹ, ಪೂಜಾ ಹವನ, ಸಪ್ತಾಧಿವಾಸ ಹೋಮ, ಕಲಾ ತತ್ವ ಹವನ, ಶಾಂತಿ, ಪ್ರಾಯಶ್ಚಿತ ಹವನ, ಶಿಖರಾವಾಸ ಹವನ, ಪಾಠ, ನೇತ್ರೋನ್ಮೀಲನ, ನಿರೀಕ್ಷೆ, ಕಲಾ ತತ್ವನ್ಯಾಸ, ಬ್ರಹ್ಮ ಘಟಸ್ಥಾಪನೆ, ರಾಜೋಪಚಾರ ಸೇವೆ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net