ಗಂಗೊಳ್ಳಿ ದೈವಸ್ಥಾನ ಪುನಃ ಪ್ರತಿಷ್ಠಾಪನೆ

Published on

ಗಂಗೊಳ್ಳಿ: ಹಿತ್ಲುಗದ್ದೆಮನೆ ಬಂದರು ಗಂಗೊಳ್ಳಿ ಶ್ರೀ ಪಂಜುರ್ಲಿ ದೈವಸ್ಥಾನದ ನಾಗ ದೇವರು, ಅಮ್ಮನವರ ಹಾಗೂ ಪಂಜುರ್ಲಿ ಪರಿವಾರ ದೈವಗಳ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಜ.20, 21ರಂದು ನಡೆಯಲಿದೆ.

20ರಂದು ಬೆಳಗ್ಗೆ 9 ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ನಾಗದೇವರ ಬನದಲ್ಲಿ ನವಗ್ರಹ ಹೋಮ, ಪ್ರತಿಷ್ಠಾಧಿವಾಸ ಹೋಮ, ಪ್ರತಿಷ್ಠಾಪನಾ, ಕಲಶಾಭಿಷೇಕ, ಸಂಜೆ ಶ್ರೀ ಅಮ್ಮನವರ ಮತ್ತು ಶ್ರೀ ಪಂಜುರ್ಲಿ ಪರಿವಾರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

21ರಂದು ಬೆಳಗ್ಗೆ 9ರಿಂದ ಶ್ರೀ ಅಮ್ಮನವರು, ಪಂಜುರ್ಲಿ ಮತ್ತು ಪರಿವಾರ ಸಾನ್ನಿಧ್ಯದಲ್ಲಿ 108 ಕಲಶ ಸ್ಥಾಪನೆ, ಕಲಾತತ್ವಹೋಮ, ಪ್ರಾಯಶ್ಚಿತ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net