ಬನಹಟ್ಟಿ ವಕೀಲರ ಸಂಘಕ್ಕೆ ಪುನರಾಯ್ಕೆ

Re-election to the Banahatti Bar Association
ಬನಹಟ್ಟಿ ವಕೀಲರ ಸಂಘದ ಚುನಾವಣೆಯಲ್ಲಿ ಸಾಗರ ಕುಲಕರ್ಣಿ ಅಧ್ಯಕ್ಷರಾಗಿ ಚುನಾಯಿತಗೊಂಡರು. ರವೀಂದ್ರ ಸಂಪಗಾಂವಿ, ರಮೇಶ ಸರಿಕರ ಇತರರಿದ್ದಾರೆ.
Published on

ರಬಕವಿ/ಬನಹಟ್ಟಿ: ರಬಕವಿ-ಬನಹಟ್ಟಿ ವಕೀಲರ ಸಂಘದ ಅಧ್ಯಕ್ಷರಾಗಿ ಯುವ ವಕೀಲ ಸಾಗರ ಕುಲಕರ್ಣಿ ಸತತ ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಒಟ್ಟು 88 ಮತಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.

ಒಟ್ಟು 208 ವಕೀಲರನ್ನು ಹೊಂದಿರುವ ಸಂಘದಲ್ಲಿ 164 ಜನರು ಮತದಾನದ ಹಕ್ಕು ಪಡೆದಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 157 ಮತಗಳು ಚಲಾವಣೆಯಾಗಿದ್ದವು. 88 ಮತಗಳನ್ನು ಪಡೆದ ಸಾಗರ ಕುಲಕರ್ಣಿ ಅಧ್ಯಕ್ಷರಾಗಿ ಚುನಾಯಿತಗೊಂಡರು. 69 ಮತಗಳನ್ನು ಪಡೆದ ಶಿವನಗೌಡ ಪಾಟೀಲ ಪರಾಭವಗೊಂಡರು.

ಸಂಘದ ಕಾರ್ಯದರ್ಶಿಯಾಗಿ ರವೀಂದ್ರ ಸಂಪಗಾಂವಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ರಮೇಶ ಸರಿಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕೆ.ಡಿ. ತುಬಚಿ, ಸಹಾಯಕ ಚುನಾವಣಾಧಿಕಾರಿಯಾಗಿ ಎಸ್.ಜಿ. ಸಲಬನ್ನವರ, ಚನ್ನು ಮಾಲಾಪುರ ಕಾರ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net