ಶ್ರೀ ಆದಿಶಕ್ತಿ ತೋಪಮ್ಮ ಮೂರ್ತಿ ಮರುಪ್ರತಿಷ್ಠಾಪನೆ

23 KRN-3
Published on

ಕೆ.ಆರ್.ನಗರ: ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಶ್ರೀ ಆದಿಶಕ್ತಿ ತೋಪಮ್ಮ ದೇವಾಲಯದಲ್ಲಿ ಮಂಗಳವಾರ ಹೊಸ ದೇವರ ಮೂರ್ತಿಯ ಮರುಪ್ರತಿಷ್ಠಾಪನೆ ಮಾಡಲಾಯಿತು.


ಮೂರ್ತಿಯ ಮರುಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಆದಿಶಕ್ತಿ ತೋಪಮ್ಮನವರ ದೇವಸ್ಥಾನದ ಸೇವಾ ಟ್ರಸ್ಟ್ ಮತ್ತು ಸುತ್ತಮುತ್ತಲ 9 ಗ್ರಾಮಗಳ ಗ್ರಾಮಸ್ಥರು, ಭಕ್ತರ ಸಮ್ಮುಖದಲ್ಲಿ ಈ ಧಾರ್ಮಿಕ ಕಾರ್ಯ ನಡೆಯಿತು. ಇದಕ್ಕೆ ಪೂರ್ವಭಾವಿಯಾಗಿ ಕಳೆದ ಎರಡು ದಿನಗಳಿಂದ ದೇವಾಲಯದಲ್ಲಿ ಹೋಮ-ಹವನ, ವಿಶೇಷ ಪೂಜೆಗಳು ನಡೆದವು. ಸೋಮವಾರ ಮತ್ತು ಮಂಗಳವಾರ ದೇವಾಲಯದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತ್ತಲ್ಲದೆ ವಿವಿಧ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.


ಕೆ.ಆರ್.ನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ದೇವಸ್ಥಾನದ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಅಣ್ಣಯ್ಯ ನಾಯಕ, ಕಾರ್ಯದರ್ಶಿ ಕೆ.ಪಿ.ಜಗದೀಶ್, ಖಜಾಂಚಿ ಪರಶಿವಮೂರ್ತಿ, ಸದಸ್ಯರಾದ ಚನ್ನಬಸಪ್ಪ, ಕುಂದೂರು ಮಹದೇವ, ನಂಜುಂಡ, ಜವರೇಗೌಡ, ಚನ್ನಕೇಶವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net