7ನೇ ದಿನಕ್ಕೆ ಬಗರ್​ ಹುಕುಂ, ಅರಣ್ಯ ಅವಲಂಬಿತರ ಅಹೋರಾತ್ರಿ ಧರಣಿ.

11GDG09
Published on

ವಿಜಯವಾಣಿ ಸುದ್ದಿಜಾಲ ಗದಗ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್​ ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರು ಮತ್ತು ಬಗರ್​ ಹುಕುಂ ಸಾಗುವಳಿದಾರರ ಹಾಗೂ ಅರಣ್ಯ ಅವಲಂಬಿತರ ಬೇಡಿಕೆ ಇಡೆರಿಕೆಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ರಾಜಕೀಯ ಮುಖಂಡರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ಕೊಟ್ಟಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವ ಎಚ್​.ಕೆ. ಪಾಟೀಲ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಇಗಾಗಲೇ ಎರಡು ದಿನಗಳು ಕಳೆದರು ಜಿಲ್ಲಾಧಿಕಾರಿಗಳು ಯಾವುದೇ ಲೀಖಿತ ಆದೇಶ ನೀಡಿಲ್ಲ. ಲಿಕಿತ ಆದೇಶ ನೀಡದೇ ಇದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.
ಧರಣಿ ನೇತೃತ್ವ ವಹಿಸಿ ಮಂಗಳವಾರ ಮಾತನಾಡಿದ ಅವರು, ಬಗರ್​ ಹುಕುಂ, ಅರಣ್ಯ ಅವಲಂಬಿತರ, ಹುಲುಗಾವಲು, ಕಂದಾಯ ಭೂಮಿಗಳಲ್ಲಿ ಉಳುಮೆ ಮಾಡುವ ರೈತರ ಹೊಸ ಅಜಿರ್ಗಳನ್ನು ಪಡೆಯುವುದು, ತಿರಸತ ಅಜಿರ್ಗಳನ್ನು ಪುನರ್​ ಪರಿಶೀಲನೆ, ಹಕ್ಕುಪತ್ರ ವಿತರಣೆ ಮಾಡಲು ಮತ್ತು ಗ್ರಾಮೀಣ ವಿಶ್ವವಿದ್ಯಾಲಯದಲ್ಲಿ ಭೂಮಿ ಕಳೆದುಕೊಂಡ ರೈತರ ಅಜಿರ್ಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳು ಕಾರ್ಯರೂಪಕ್ಕೆ ತರುವ ಆದೇಶವನ್ನು ಜಿಲ್ಲಾಧಿಕಾರಿಗಳು ನೀಡಬೇಕು. ಅಲ್ಲಿಯವರೆಗೂ ನಮ್ಮ ಅಹೋರಾತ್ರಿ ಧರಣಿ ಮುಂದುವರಿಯಲಿದೆ ರವಿಕಾಂತ ಅಂಗಡಿ ಹೇಳಿದರು.
ರೂಪಾ ನಾಯ್ಕ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದು, ಕಾನೂನು ಬದ್ದವಾದ ಬೇಡಿಕೆಗಳನ್ನು ಕೂಡಲೇ ಜಿಲ್ಲಾಡಳಿತ ಈಡೇರಿಸಬೇಕು. ಸ್ವತಂತ್ರ ಬಂದು 75ವರ್ಷ ಕಳೆದರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಸುಮಾರು ಐದಾರು ದಿನಗಳಿಂದ ನಮ್ಮ ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಬಿಟ್ಟು ಹೋರಾಟ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಆದೇಶ ಮಾಡಿ ರೈತರ ಬವಣೆ ನೀಗಿಸುವಲ್ಲಿ ಕೆಲಸ ಮಾಡುಬೇಕು. ಬೇಡಿಕೆಗಳನ್ನು ಇಡೇರಿಸುವ ಬರವಸೆ ನೀಡಿ ಕಾರ್ಯರೂಪಕ್ಕೆ ಬರದೆ ಇದ್ದರೆ ಏನೂ ಪ್ರಯೋಜನವಿಲ್ಲ. ಹಿಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಆದೇಶ ನೀಡಬೇಕೆಂದು ಒತ್ತಾಯ ಮಾಡಿದರು.
ಈ ವೇಳೆ ಎಂ. ಎಸ್​ ಪರ್ವತಗೌಡ, ಎಂ.ಪಿ ಮುಳಗುಂದ, ರಮೇಶ, ಬಸವಣೆಪ್ಪ ಚಿಂಚಲಿ, ಎನ್​.ಟಿ ಪೂಜಾರ, ಹಳ್ಳೂರಮಠ ಸೇರಿದಂತೆ ಅನೇಕ ರೈತರು ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದರು.

ಕೋಟ್​:
ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆಯನ್ನು ನೀಡಿ ಎರಡು ದಿನಗಳು ಕಳೆದಿವೆ, ಜಿಲ್ಲಾಡಳಿತ ನಮ್ಮ ಹೋರಾಟವನ್ನು ಲಘುವಾಗಿ ಪರಿಗಣಿಸದೆ, ಉಗ್ರವಾದ ಹೋರಾಟಕ್ಕೆ ಅವಕಾಶ ಕೊಡದೇ ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ಅಧಿಕಾರಿಗಳ ಸಭೆ ಕರೆದು ನಮ್ಮ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರುವ ಲಿಖಿತ ಆದೇಶ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ.
-ರವಿಕಾಂತ ಅಂಗಡಿ,
ರಾಜ್ಯಾಧಕ್ಷರು ಉತ್ತರ ಕರ್ನಾಟಕ ಮಹಾಸಭಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net