ಆರ್​ಡಿಪಿಆರ್​ ವಿವಿ ನಲ್ಲಿ ವಚನ ದರ್ಶನ ರಾಷ್ಟ್ರೀಯ ವಿಚಾರ ಸಂಕಿರಣ

18GDG01
Published on

ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ಪರಂಪರೆಯ ಆಚೆಗಿಟ್ಟು ನೋಡಲಾಗದ ವಚನ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿಕೊಳ್ಳುವ ವಚನ ವಿಶ್ವಕೋಶ ರಚನೆಯಾಗಬೇಕಾದ ಅಗತ್ಯವಿದೆ ಎಂದು ವಿದ್ವಾಂಸ ಡಾ. ಸಂಗಮೇಶ ಸವದತ್ತಿಮಠ ಹೇಳಿದರು.
ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ವಿಶ್ವ ವಿದ್ಯಾಲಯ, ಅಖಿಲ ಭಾರತ ಸಾಹಿತ್ಯ ಪರಿಷತ್ತು, ಕನಕದಾಸ ಶಿಣ ಸಂಸ್ಥೆ ಸಹಯೋಗದಲ್ಲಿ ಮೂರು ದಿನಗಳ ವರೆಗೆ ಆಯೋಜಿಸಿದ ವಚನ ದರ್ಶನ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ವಚನ ಸಾಹಿತ್ಯ ಜಗತ್ತಿನಲ್ಲಿಯೇ ಅನನ್ಯ ಸಾಹಿತ್ಯವಾಗಿದ್ದು, ಅನೇಕ ಕೃತಿಗಳು ಹೊರ ಬಂದರೂ ಕೂಡ ಈವರೆಗೆ ವಚನ ವಿಶ್ವಕೋಶ ರಚನೆಯಾಗಿಲ್ಲ. ಕಾರಣ ಶಿವಶರಣರ ವಚನ ಸೀಮಿತಾರ್ಥದಲ್ಲಿ ಗ್ರಹಿಸಿ ಮಿತಿಗೊಳಿಸುವ ಕೆಲಸ ಮಾಡದೇ ವೈಶ್ವಿಕ ದೃಷ್ಟಿಯಲ್ಲಿ ನೋಡುವಂತಾಗಬೇಕು. ಸಕಲ ಜೀವಾತ್ಮರಿಗೆ ಅವರವರ ದೃಷ್ಟಿಕೋನದಲ್ಲಿ ಅರ್ಥ ವ್ಯಾಪ್ತಿಗಳನ್ನು ವಿಸ್ತರಿಸಿಕೊಳ್ಳುವ ವೈಶಾಲ್ಯತೆ ಹೊಂದಿದ್ದರೂ ಭಿನ್ನಭಾವಗಳಿಗೆ ವಿರೋಧ ಸಲ್ಲದು ಎಂದರು.
ವಚನಕಾರರದು ಮೂಲತಃ ವೀರಶೈವ ಪ್ರಣಿತವಾದ ತತ್ವದವರು. ಬಸವಣ್ಣ ಕಾಯಕದಿಂದ ಸಮಾಜದ ವಿವಿಧ ಸ್ತರದ ಭಕ್ತರನ್ನು ಮೇಲಕ್ಕೆತ್ತುವ ಕೆಲಸವನ್ನು ವಚನಕಾರರು ಮಾಡಿದ್ದಾರೆ. ಆತ್ಮಿಕ, ಸಾಮಾಜಿಕ, ಉಭಯ ಸ್ತರಗಳಲ್ಲಿಯೂ ವಿಸ್ತಾರಗೊಂಡಿದೆ. ನಕಾರಾತ್ಮಕ ಸಂಕುಚಿತ ಭಾವವನ್ನು ಬಿಟ್ಟು, ಕೇವಲ ಕರ್ನಾಟಕದ ಮಟ್ಟಿಗೆ ವಿಚಾರ ಮಾಡದೇ ತಮ್ಮ ಮೂಗಿನ ನೇರಕ್ಕೆ ಐಡಿಯಾಲಾಜಿ ಮತ್ತು ಕಲ್ಪಕತೆಯಿಂದ ಹೊರ ಬಂದು ವಾಸ್ತವಿಕವಾದ ಭಾರತೀಯ ಸಂಸತಿಯ ಮೂಲಕವೇ ವಚನ ಭಕ್ತಿ ಕಾಯಕ ದಾಸೋಹಗಳನ್ನು ನೋಡಬೇಕು ಎಂದು ಅವರು ಹೇಳಿದರು.
ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ವಚನಕಾರರು ಗ್ರಾಮಮಟ್ಟದಿಂದಲೇ ಔನ್ನತ್ಯಕ್ಕೇ ಏರಿದವರು. ಅಧ್ಯಾತ್ಮಿಕತೆ ಇಲ್ಲದೇ ಕಾಯಕವನ್ನು ತಿರಸ್ಕರಿಸಿದವರು. ಅವರ ದಾಸೋಹದ ದೃಷ್ಟಿ ಸಮಷ್ಟಿಯ ಪ್ರಜ್ಞೆಯಲ್ಲಿಯೇ ಬಂದಿದೆ. ಗ್ರಾಮಾಭಿವೃದ್ಧಿ ಕೇವಲ ಆಥಿರ್ಕತೆಯ ಮೇಲೆ ನಿಂತಿಲ್ಲ. ಸಮಗ್ರ ದೃಷ್ಟಿಕೋನದಿಂದಲೇ ವ್ಯಕ್ತಿ ಬೆಳೆಯಬೇಕು ಎಂಬುದು ಶರಣರ ದರ್ಶನವಾಗಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ವಿದ್ಯಾಲಯ ಶೈಣಿಕವಾದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ. ಅಂದಾಜು 70 ಜನರು ವಿಷಯ ಮಂಡನೆ ಮಾಡಲು ಆಗಮಿಸಿದ್ದು ಸಂತಸದ ವಿಷಯವಾಗಿದೆ. ಈ ಸಂಕಿರಣದಲ್ಲಿ ಚರ್ಚೆ ನಡೆದು ಶಿವಶರಣರ ವಚನಗಳನ್ನು ಹೊಸದಾದ ಈ ನೆಲದ ದೃಷ್ಟಿಕೋನದಲ್ಲಿ ಚರ್ಚೆಗಳು ನಡೆಯುವ ಆಶಯವನ್ನು ವ್ಯಕ್ತಪಡಿಸಿದರು,
ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಮಾದಾರ ಚನ್ನಯ್ಯ ಶ್ರೀಗಳು ಮಾತನಾಡಿ, ಕೆಳ ಸ್ತರದಲ್ಲಿರುವ ಯೋಗ್ಯತೆ ಇರುವ ವ್ಯಕ್ತಿಗಳನ್ನು ಎತ್ತರಕ್ಕೆ ಏರಿಸಿದ ಕಾಲ ಶರಣರ ಕಾಲವಾಗಿದೆ. ಹೀಗಾಗಿ ಕೆಳಸ್ತರದ ಕಾಯಕಕ್ಕೆ ಮನ್ನಣೆ ದೊರಕಿದೆ. ರಾಮರಾಜ್ಯಕ್ಕೂ ಮತ್ತು ಶರಣರ ಕಾಲದ ಬಸವಣ್ಣನವರಂಥ ಶರಣರು ಕಂಡ ಕಾಲದ ಸಮಾಜಕ್ಕೂ ಭಿನ್ನತೇ ಏನೂ ಇಲ್ಲ. ಭಾರತೀಯ ವಿಚಾರ ಧಾರೆಯಲ್ಲಿಯೇ ಸೂಕ್ಷ$್ಮವಾಗಿ ವಚನಕಾಲವನ್ನು ನೋಡಬೇಕಿದೆ ಎಂದರು.
ವಿವಿ ಕುಲಸಚಿವ ಡಾ. ಸುರೇಶ ನಾಡಗೌಡರ, ರವೀಂದ್ರನಾಥ ದಂಡಿನ, ಡಾ. ಶಿವಶರಣ ಗೋಡ್ರಾಳ, ದುಂಡಪ್ಪ ಬಡಲಕ್ಕಣ್ಣವರ, ಜನಮೇಜಯ ಉಮ್ಮಜಿರ್, ಡಾ. ಸಂತೋಷಕುಮಾರ, ರವಿ ದಂಡಿನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net