

ಗದಗ:
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಮಾ. 10ರಂದು ನಡೆಯಲಿರುವ 3ನೇ ಘಟಿಕೋತ್ಸವದಲ್ಲಿ ಗಾಂಧಿವಾದಿ ಬೆಳಗಾವಿಯ ಶಿವಾಜಿ ಕಾಗಣಿಕರ್ ಹಾಗೂ ಮೈಸೂರಿನ ಎ.ಪಿ.ಚಂದ್ರಶೇಖರ ಅವರಿಗೆ ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಡಾ. ವಿಷ್ಣುಕಾಂತ ಚಟಪಲ್ಲಿ ಹೇಳಿದರು.
ನಗರದ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಂಫಾಲಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಸುಬ್ಬಣ್ಣ ಅಯ್ಯಪ್ಪನ ಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಟಿಕೋತ್ಸವದಲ್ಲಿ ವಿಭಾಗವಾರು ಪ್ರಥಮ ಸ್ಥಾನ ಗಳಿಸಿದ 10 ಜನ ವಿದ್ಯಾಥಿರ್ಗಳಿಗೆ ಬಂಗಾರದ ಪದಕ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕುಲಸಚಿವ ಬಸವರಾಜ ಲಕ್ಕಣ್ಣವರ, ವಾರ್ತಾ ಅಧಿಕಾರಿ ಪ್ರಶಾಂತ ಮಡ್ನೂರ ಇತರರು ಇದ್ದರು.
ಗೌರವ ಡಾಕ್ಟರೇಟ್:ಬೆಳಗಾವಿ ಮೂಲದ ಶಿವಾಜಿ ಕಾಗಣಿಕರ ಅವರು ಹೆಸರಾಂತ ಗಾಂಧಿವಾದಿಗಳು. ರಾತ್ರಿ ಶಾಲೆಗಳನ್ನು ನಡೆಸಿದವರು. ಜಲ ಸಂರಕ್ಷಣೆಯಲ್ಲಿ ತಮ್ಮದೇ ಚಾಪು ಮೂಡಿಸಿದವರು. ಬೆಳಗಾವಿ ಸಮೀಪದ ಗ್ರಾಮಗಳನ್ನು ಪರಿಸರ ಸ್ನೇಹಿಯಾಗಿ ಪರಿವತಿರ್ಸಿದ್ದಾರೆ. ಇದರೊಂದಿಗೆ ಮೈಸೂರಿನ ಎ.ಪಿ. ಚಂದ್ರಶೇಖರ 40 ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡವರು. 13 ಎಕರೆಯಲ್ಲಿ 4 ಸಾವಿರ ವಿವಿದ ಜಾತಿಯ ಸ್ಥಳಿಯ ಸಸ್ಯ ಬೆಳೆದಿದ್ದಾರೆ ಚಟಪಲ್ಲಿ ತಿಳಿಸಿದರು.
ಬಂಗಾರದ ಪದಕ:ಪ್ರೀತಮ್ ಸಿ.ಜಿ(ಎಂಬಿಎ), ದಿವ್ಯಾ ಬಿ.ಯು(ಎಂಎ- ಆರ್ಡಿಪಿಆರ್), ಚಿದಾನಂದ ಆಶ್ಯಾಲ್(ಎಂಎ), ವೀಣಾ ಭಜಂತ್ರಿ ಮತ್ತು ಕೆ.ಆರ್. ಮೋಹನ್(ಎಂಎಸ್ಸಿ), ಎಸ್. ತೇಜಸ್(ಎಂಪಿಎಚ್), ಪ್ರೀಯಾ ನೀರಲಕಟ್ಟಿ(ಎಂಎಸ್ ಡಬ್ಲು), ಶೋಭಾ ಪೂಜಾರ್(ಎಂಎ ಎಕನಾಮಿಕ್ಸ್), ಪೂಜಾ ಕಣವಿ(ಎಂಕಾಂ) ಆಫ್ರಿನ್ಸಾನ್ ಹಂಪಾಪಟ್ಟಣ(ಎಂಎಸ್ಸಿ) ಪ್ರಸಕ್ತ ಸಾಲಿನ ಬಂಗಾರದ ಪದಕ ವಿಜೇತರರು ಎಂದು ಮಾಹಿತಿ ನೀಡಿದರು.