ಕ್ರೀಡೆಯು ಶಿಕ್ಷಣದ ಅವಿಭಾಜ್ಯ ಅಂಶ: ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ

IMG-20240716-WA0020.jpg
Published on

ಬೆಳಗಾಚಿ:ಕಾಲೇಜು ಶಿಕ್ಷಣವು ಕೇವಲ ಪಠ್ಯ, ತರಗತಿ ಮತ್ತು

ಬೊಧನೆಗೆ ಸಿಮೀತಗೊಂಡಿಲ್ಲ. ಕ್ರೀಡೆ, ಆಟ ಮತ್ತು

ಮೈದಾನ ಈ ಎಲ್ಲ ಸಂಗತಿಗಳಿಂದ ಶಿಕ್ಷಣವು

ಪರಿಪೂರ್ಣಗೊಳ್ಳುವುದು ಎಂದು ಆರ್‌ಸಿಯು ಕುಲಪತಿ

ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದರು.

ರಾಣಿ ಚನ್ನಮ್ಮವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನವಿಭಾಗದ ವತಿಯಿಂದ ವಿವಿಯ ಕುವೆಂಪು ಸಭಾಭವನದಲ್ಲಿಮಂಗಳವಾರ ಜರುಗಿದ ಒಂದು ದಿನದ ಕ್ರೀಡಾ ನಿಯಮಮತ್ತು ಮಾನದಂಡಗಳ ವಿನ್ಯಾಸ ಕುರಿತಾದ ವಿಚಾರ

ಮಂಥನ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ

ಮಾತನಾಡಿದರು.

ವಿದ್ಯಾರ್ಥಿಗಳು ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ.

ಕಾಲೇಜುಗಳ ಮೈದಾನಗಳು ಬೀಕೊ ಎನ್ನುತ್ತಿವೆ.

ಅತಿಯಾದ ಮೊಬೈಲ್ ಬಳಕೆ ಮತ್ತು ದುಶ್ಚಟಗಳಿಗೆ

ಯುವಕರು ಬಲಿಯಾಗುತ್ತಿದ್ದಾರೆ. ಸೋಮಾರಿತನ

ಮತ್ತು ಬೇಜವಾಬ್ದಾರಿಯಿಂದ ಯುವಕರು ದಾರಿ

ತಪ್ಪುತ್ತಿದ್ದಾರೆ. ಅವರಿಗೆ ಕ್ರೀಡೆಯಲ್ಲಿ ತೊಡಗುವಂತೆ

ಉತ್ತೇಜಿಸಿ, ಜವಾಬ್ದಾರಿಯುತ ನಾಗರಿಕರನನಾಗಿ ನಿರ್ಮಿಸುವ ಹೊಣೆಗಾರಿಕೆ ದೈಹಿಕ ಶಿಕ್ಷಣ ನಿರ್ದೇಶಕರದ್ದಾಗಿದೆ ಎಂದು

ತಿಳಿಸಿದರು.

ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತೊಡಗಿದರೆ, ಅವರು

ನಡವಳಿಕೆ ಸುಧಾರಣೆ ಜೊತೆಗೆ ಶಿಸ್ತು

ಮೈಗೂಡಿಕೊಳ್ಳುತ್ತಾರೆ. ಚಾರಿತ್ರö್ಯ ನಿರ್ಮಾಣ, ಸಂಸ್ಕಾರ

ಮತ್ತು ಜೀವನದ ಮೌಲ್ಯ ಮತ್ತು ಆರೋಗ್ಯ ಈ ಎಲ್ಲ

ಸಂಗತಿಗಳು ಕ್ರೀಡೆಯಿಂದ ವಿದ್ಯಾರ್ಥಿಗಳಿಗೆ

ದೊರೆಯುತ್ತದೆ. ಪ್ರತಿನಿತ್ಯ ಆಟ ಆಡುವುದರಿಂದ ಮನಸ್ಸು

ಉತ್ಸಾಹದಿಂದ ಭರಿತವಾಗುವ ಜೊತೆಗೆ, ಬುದ್ಧಿ ಮತ್ತು

ಏಕಾಗ್ರತೆ ಚುರುಕಾಗುತ್ತದೆ. ಆದ್ದರಿಂದ ದೈಹಿಕ ಶಿಕ್ಷಣ

ನಿರ್ದೇಶಕರು ವಿದ್ಯಾರ್ಥಿಗಳನ್ನು ಸತ್‌ಪ್ರಜೆಗಳಾನ್ನಾಗಿ

ರೂಪಿಸಲು ಮುಂದಾಗಬೇಕು ಎಂದರು.

೪-೫ ದಶಕಗಳ ಹಿಂದೆ ಬೆಳಗಾವಿ ಜಿಲ್ಲೆಯ

ಕಾಲೇಜುಗಳು ಕ್ರೀಡಾ ಚಟುವಟಿಕೆ ಮತ್ತು ಕ್ರೀಡಾ

ಪಟುಗಳಿಂದ ಕಂಗೊಳಿಸುತ್ತಿತ್ತು. ಹಾಗಾಗೀ ಆರ್‌ಸಿಯು

ವ್ಯಾಪ್ತಿಯ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ

ಜಿಲ್ಲೆಗಳಲ್ಲಿ ನಿರಂತರವಾಗಿ ಕ್ರೀಡಾ ಚಟುವಟಿಕೆಗಳನ್ನು

ಆಯೋಜಿಸುವ ಯೋಜನೆ ರೂಪಿಸಲಾಗುತ್ತಿದೆ. ಆರ್‌ಸಿಯು

ವ್ಯಾಪ್ತಿಯ ೩೪೫ ಪದವಿ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ

ನಿರ್ದೇಶಕರ ನೇಮಕಾತಿಗೆ ಕಾಲೇಜುಗಳಿಗೆ

ಸೂಚಿಸಲಾಗುವುದು. ಮುಂಬರುವ ದಿನಗಳಲ್ಲಿ

ಆರ್‌ಸಿಯುದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದ

ವಿಭಾಗವು ಅತ್ಯಂತ ಸಕ್ರಿಯವಾಗಿ ದೈಹಿಕ ಶಿಕ್ಷಣ ಮತ್ತು

ಕ್ರೀಡಾ ತರಬೇತಿಗೆ ಅವಶ್ಯಕ ಸಂಪನ್ಮೂಲ ಮತ್ತು

ಸವಲತ್ತುಗಳನ್ನು ಒದಗಿಸಲಾಗುವುದು ಎಂದರು.

ಬೆAಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.

ಸುಂದರ ರಾಜ ಅರಸ್ ಮಾತನಾಡಿ, ದೈಹಿಕ ಶಿಕ್ಷಣ

ನಿರ್ದೇಶಕರು ಎಂದರೆ, ಕಾಲೇಜಿನ ಎಲ್ಲ ಪಠ್ಯೇತರ

ಚಟುವಟಿಕೆಗಳ ಉಸ್ತುವಾರಿಗಳು ಎಂಬ ಪ್ರತೀತಿ ಎಲ್ಲೆಡೆ

ಸಾಮಾನ್ಯವಾಗಿದೆ. ಪಠ್ಯೇತರ ಸಂಗತಿಗಳು ವಿದ್ಯಾರ್ಥಿಯಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿವೆ. ಆದ್ದರಿಂದ ದೈಹಿಕಶಿಕ್ಷಣ ನಿರ್ದೇಶಕರು, ಯೋಗ, ಕ್ರೀಡೆ, ಕರಾಟೆ ಮತ್ತುದೇಹದ್ಯಾರ್ಢ ವಿಷಯಗಳ ಕುರಿತಾಗಿ ವಿದ್ಯಾರ್ಥಿಗಳಲ್ಲಿ

ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ

ಆರೋಗ್ಯದ ಸುಧಾರಕರಾಗಿ ಕಾರ್ಯನಿರ್ವಹಿಸಬೇಕು

ಎಂದರು.

ಕುಲಸಚಿವೆ ರಾಜಶ್ರೀ ಜೈನಾಪೂರ ಮಾತನಾಡಿ, ಆಟ

ಆಡುವುದರಿಂದ ಮನಸ್ಸಿಗೆ ನವ ಉಲ್ಲಾಸ

ದೊರೆಯುವುದು. ಆರ್‌ಸಿಯುನಲ್ಲಿ ಕಳೆದ ವರ್ಷದಿಂದ

ವಿದ್ಯಾರ್ಥಿಗಳ ಕ್ರೀಡಾಕೂಟದ ಜೊತೆಗೆ ಬೋಧಕ,

ಬೋದಕೇತರ ಸಿಬ್ಬಂದಿ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ

ಎಂದರು.

ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ

ಆಗಮಿಸಿದ ಧಾರವಾಡದ ಕೆ.ಜಿ.ನಾಡಿಗೇರ ದೈಹಿಕ ಶಿಕ್ಷಣ

ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಂ. ಜಿ. ತಿಮ್ಮಾಪುರ

ಮತ್ತು ವಿಜಯಪುರದ ಅಕ್ಕಮಹಾದೇವಿ ರಾಜ್ಯ ಮಹಿಳಾ

ವಿವಿಯ ಪ್ರೊ. ರಾಮಕುಮಾರ ಮಾಳಿಪಾಟೀಲ ಅವರಿಗೆ

ಸನ್ಮಾನಿಸಲಾಯಿತು. ಆರ್‌ಸಿಯು ಹಣಕಾಸು ಅಧಿಕಾರಿ ಎಂ.ಎ. ಸಪ್ನಾ

ಸೇರಿದಂತೆ ಆರ್‌ಸಿಯು ವ್ಯಾಪ್ತಿಯ ಬೆಳಗಾವಿ, ವಿಜಯಪುರ

ಮತ್ತು ಬಾಗಲಕೋಟೆ ಜಿಲ್ಲೆಯ ನೂರಕ್ಕೂ ಹೆಚ್ಚು

ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಹಾಜರಿದ್ದರು.

ಡಾ. ಜಗದೀಶ ಗಸ್ತಿ ಸ್ವಾಗತಿಸಿದರು. ಡಾ. ರವಿ ಗೋಲಾ

ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net