ಸಾಹಿತ್ಯದ ಸಂಶೋಧನೆಯಿಂದ ಭಾಷೆಯ ಸೌಂದರ್ಯ ವೃದ್ಧಿ

IMG-20240713-WA0016.jpg
Published on

ಬೆಳಗಾವಿ:ಭಾಷೆ ಕೇವಲ ಸಂವಹನ ಒಂದು ಸಾಧನವಲ್ಲ. ಭಾಷೆ ಮನದ ಭಾವ ಪ್ರಕಟಿಕರಣದ ಜೊತೆಗೆ, ಆ ನಾಡಿನ, ಪ್ರಕೃತಿಯ, ಸಂಸ್ಕೃತಿ ಮತ್ತು ಸಾಹಿತ್ಯದ ಉಗಮದ ಮೂಲವಾಗಿರುತ್ತದೆ. ಹಾಗಾಗೀ ಸಾಹಿತ್ಯ ಸಂಶೋಧನೆಗಳು ಭಾಷೆಯ ಸೌಂದರ್ಯವನ್ನು ವೃದ್ಧಿಸುತ್ತವೆ ಎಂದು ಆರ್‌ಸಿಯು ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮರಾಠಿ ಅಧ್ಯಯನ ಮತ್ತು ಸಂಶೋಧನಾ ವಿಭಾಗವು, ಕರ್ಮವೀರ ಭಾವುರಾವ್ ಪಾಟೀಲ ವಿವಿಯ ಛತ್ರಪತಿ ಶಿವಾಜಿ ಮಹಾವಿದ್ಯಾಲಯದ ಸಹಯೋಗದೊಂದಿದೆ ‘ಮರಾಠಿ ಭಾಷೆ ಮತ್ತು ಸಾಹಿತ್ಯ: ಸಂಶೋಧನೆಯ ನವ ನಿರ್ದೇಶನಗಳು’ ವಿಷಯದ ಕುರಿತಾಗಿ ಶನಿವಾರ ದಿ: ೧೩ ಜುಲೈ ೨೦೨೪ರಂದು ವಿವಿಯಲ್ಲಿ ಏರ್ಪಡಿಸಿದ ಒಂದು ದಿನದ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಷೆಗೆ ಮಾತೃ ಸ್ಥಾನ ನೀಡಿದ ಸಂಸ್ಕೃತಿ ನಮ್ಮದು. ಆದ್ದರಿಂದ ಭಾಷೆ, ಕಲೆ, ಕವಿತೆ, ನಾಟಕ ಈ ಎಲ್ಲ ವಿಷಯಗಳ ಕುರಿತಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡುವಂತೆ ಪ್ರೇರೆಪಿಸಬೇಕು. ಕೆಲ ಬಾರಿ ಹಳೆಯ ಸಾಂಪ್ರಾದಾಯಿಕ ಪದ್ಧತಿಯ ಮೂಲಕ ಓದುವುದರ ಜೊತೆಗೆ ನವ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಿಗೆ ಮನ ಮುಟ್ಟುವ ಜೊತೆಗೆ ಪರಿಣಾಮಕಾರಿಯಾಗಿ ಪಾಠ ಮಾಡಬೇಕು ಮತ್ತು ಕಲಿಕೆಗೆ ಪ್ರೇರೆಪಿಸಬೇಕು ಎಂದರು.

ಭಾಷೆ ಮತ್ತು ಸಾಹಿತ್ಯದ ವಿದ್ಯಾರ್ಥಿಗಳು, ನಿರಂತರವಾಗಿ ಪುಸ್ತಕಗಳ ವಾಚನ, ನಾಟಕ ಮತ್ತು ಕಲಾ ಪ್ರಕಾರಗಳ ವೀಕ್ಷಣೆ, ಸಂಗೀತ ಕೇಳುವುದನ್ನು ರೂಢಿಸಿಕೊಳ್ಳಬೇಕು. ಈ ಮೂರು ಸಂಗತಿಗಳು ಭಾಷೆ ಮತ್ತು ಸಾಹಿತ್ಯದ ಕುರಿತಾದ ಒಲವು ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ. ಪಾಠವನ್ನು ಕೇವಲ ತರಗತಿಯಲ್ಲಿ ಬೋಧನೆ ಮುಖಾಂತರ ಮಾತ್ರವಲ್ಲದೆ, ವಿವಿಧ ಶೈಕ್ಷಣಿಕ ಪ್ರವಾಸ, ಕಲಾ ಪ್ರಕಾರಗಳ ವೀಕ್ಷಣೆ, ನಾಟಕಗಳ ವಿಶ್ಲೇಷಣೆಗೆ ಆದತ್ಯೆ ನೀಡಬೇಕು ಎಂದರು.

ಮಹಾರಾಷ್ಟçದ ಸಾತಾರಾದ ಕರ್ಮವೀರ ಭಾವುರಾವ ಪಾಟೀಲ ವಿವಿಯ ಛತ್ರಪತಿ ಶಿವಾಜಿ ಘಟಕ ಮಹಾವಿದ್ಯಾಲಯದ ಭಾಷಾ ವೇದಿಕೆಯ ನಿರ್ದೇಶಕ ಪ್ರೊ. ಸುಭಾಷ ವಾಘಮಾರೆ ಮಾತನಾಡಿ, ಮಾನವ ಕುಲದ ಉತ್ಥಾನ ಮತ್ತು ಸತ್ಯದ ಅರಿವು ಈ ಉದ್ದೇಶಗಳಿಗಾಗಿ ಸಂಶೋಧನೆಗಳು ಜರುಗಬೇಕು. ಸಂಶೋಧಕನಿಗೆ ತಮ್ಮ ಸಂಶೋಧನಾ ವಿಧಾನ ಮತ್ತು ಫಲಿತಾಂಶಗಳ ಮೇಲೆ ಅಗಾಧ ನಂಬಿಕೆ ಮತ್ತು ವಿಶ್ವಾಸವಿರಬೇಕು. ಮನುಕುಲದ ಉತ್ಥಾನಕ್ಕೆ ಮತ್ತು ಜ್ಞಾನದ ವೃದ್ಧಿಗೆ ಸಹಕಾರವಾಗದ ಸಂಶೋಧನೆಗಳು ದೊಡ್ಡ ವ್ಯರ್ಥ ಎಂದು ಜರಿದರು.

ಇಂಗ್ಲೇಡ್‌ನಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮಂಡಿಸಿದ ಪ್ರಾಬ್ಲ್ಂ ಆಫ್ ರೂಪಿ ಈ ವಿಷಯದ ಕುರಿತಾದ ಮಹಾಪ್ರಬಂಧದಲ್ಲಿ ಬ್ರಿಟಿಷರ ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸಿದ್ದರು. ಆ ಕಾರಣಕ್ಕಾಗಿ ಸ್ಕೂಲ್ ಆಫ್ ಎಕಾನಾಮಿಕ್ಸ್ನ ಅನೇಕ ಹಿರಿಯ ಪ್ರಾಧ್ಯಾಪಕರು ಡಾ.ಅಂಬೇಡ್ಕರ್ ಅವರಿಗೆ ತಮ್ಮ ಪ್ರಬಂಧದಲ್ಲಿನ ಅನೇಕ ವಿಷಯಗಳನ್ನು ತಿದ್ದುಪಡಿ ಮಾಡಲು ತಿಳಿಸಿದಾಗ ಡಾ.ಅಂಬೇಡ್ಕರ್ ತಿದ್ದುಪಡಿ ಮುಂದಾಗದೆ, ಧೈರ್ಯದಿಂದ ತಮ್ಮ ಸಂಶೋಧನೆಯ ಸತ್ಯಾಸತ್ಯತೆ ಬಗ್ಗೆ ವಾದ ಮಂಡಿಸಿದರು. ಡಾ. ಅಂಬೇಡ್ಕರ್ ಹೊಂದಿದ್ದ ಧೈರ್ಯವನ್ನು ಇಂದು ಪ್ರತಿಯೊಬ್ಬ ಸಂಶೋಧಕನು ತಮ್ಮ ಸಂಶೋಧನೆ ಕುರಿತಾಗಿ ಹೊಂದುವ ಅವಶ್ಯಕತೆಯಿದೆ ಎಂದರು.

ಗೋವಾ ವಿವಿಯ ಡಾ. ವಿನಯ ಮಡಗಾಂವಕರ, ಕೊಲ್ಹಾಪುರ ಶಿವಾಜಿ ವಿವಿಯ ಪ್ರೊ. ನಂದಕುಮಾರ ಮೋರೆ ಅವರು ಸಂಶೋಧನೆ ಕುರಿತಾದ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಡಾ. ಮೈಜೊದ್ದೀನ್ ಮುತವಳಿ, ಮರಾಠಿ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು, ಆರ್‌ಸಿಯು ವ್ಯಾಪ್ತಿಯ ವಿವಿಧ ಸ್ನಾತಕ ಮಹಾವಿದ್ಯಾಲಯಗಳ ಮರಾಠಿ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ನವೀಜನ ಕಾಂಬ್ಳೆ ನಿರೂಪಿಸಿದರು. ಪ್ರೊ. ಮನೀಷಾ ನೇಸರಕರ ಪರಿಚಯಿಸಿದರು. ವಿಭಾಗದ ಮುಖ್ಯಸ್ಥ ಪ್ರೊ. ಚಂದ್ರಕಾAತ ವಾಘಮಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂಜಯ ಕಾಂಬ್ಳೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net