ಇನ್‍ಫ್ಲಿಬ್‌ ನೆಟ್ ಜೊತೆ ರಾಣಿ ಚನ್ನಮ್ಮ ಒಡಂಬಡಿಕೆ

IMG-20241014-WA0013.jpg
Published on

ಬೆಳಗಾವಿ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಇನ್‍ಫ್ಲಿಬ್ ನೆಟ್ ಕೇಂದ್ರವನ್ನು ಪ್ರೊ. ದೇವಿಕಾ ಮಡಳ್ಳಿ ಉದ್ಘಾಟಿಸಿದರು. ವಿಶ್ವವಿದ್ಯಾಲಯವು ತನ್ನ ಶೈಕ್ಷಣಿಕ ಸಂಪತ್ತು ಮತ್ತು ಸಂಶೋಧನಾ ಸಾಮರ್ಥ್ಯವನ್ನು ವಿಸ್ತರಿಸುವಲ್ಲಿ ಮಹತ್ತರ ಹೆಜ್ಜೆಯಿರಿಸಿದೆ. ಅವರು ಕೇಂದ್ರದ ಉದ್ಘಾಟನೆ ಮಾಡಿ, 1991 ರಲ್ಲಿ ಪ್ರಾರಂಭಗೊಂಡ ಇನ್‍ಫ್ಲಿಬ್‌ನೆಟ್‍ನ ಬೆಳೆವಣಿಗೆಯ ಕುರಿತು ವಿವರಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಇನ್‍ಫ್ಲಿಬ್‌ನೆಟ್ ಜೊತೆ ಮಹತ್ವದ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಇದು ಇನ್‍ಫ್ಲಿಬ್‌ನೆಟ್ನ ಹಲವಾರು ಸೇವೆಗಳನ್ನು ಬಳಸಿಕೊಳ್ಳುವಿಕೆಯಲ್ಲಿ ಮಹತ್ವದ ಒಡಂಬಡಿಕೆಯಾಗಿದೆ. ಉದಾಹರಣೆಗೆ, ಓಪನ್ ಆಕ್ಸಸ್ ಉಪಕ್ರಮಗಳು: ಶೋಧಗಂಗಾ, ಶೋಧಗಂಗೋತ್ರಿ, ಶೋಧಶುದ್ಧಿ, ಶೋಧಚಕ್ರ, ವಿದ್ಯಾಮಿತ್ರವ ಮತ್ತು ಸ್ವಯಂ ಹೀಗೆ ಮುಂತಾದ ವೇದಿಕೆಗಳ ಕುರಿತು ಅವರು ವಿವರಿಸಿದರು. ವಿಶೇಷವಾಗಿ, ಮಹಿಳಾ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ಸಂಯುಕ್ತ ಸಂಶೋಧನೆಯ ಮೂಲಕ ಸಬಲಗೊಳಿಸುವ ಶೆರ್ನಿ ಎಂಬ ಹೊಸ ನೆಟ್ ವರ್ಕನ್ನು ಪರಿಚಯಿಸಿದರು. .

ಪ್ರಮಾಣೀಕರಣ ಮತ್ತು ಶ್ರೇಯಾಂಕ: ಎನ್‌ಐಆರ್‌ಎಫ್, ಇ-ಎನ್‍ಬಿಎ, ಎನ್‍ಎಎಸಿ ಮತ್ತು ಎಆರ್‌ಐಐಎ ಅಂತಹ ವೇದಿಕೆಗಳು ಹಾಗೂ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳಲ್ಲಿ ಅವುಗಳ ಮಹತ್ವವನ್ನು ವಿವರಿಸಲಾಯಿತು. ಇವು ಉತ್ತಮ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ನಿರ್ವಹಣೆಗಾಗಿ ಪ್ರಮುಖ ದಾರಿಯಾಗಿವೆ ಎಂದು ಅವರು ತಿಳಿಸಿದರು.

ಸಂಶೋಧನಾ ಅಭಿವೃದ್ಧಿ: ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನೋಂದಣಿ (NRDR) ಯ ಯೋಜನೆ ಮೂಲಕ ಸಂಶೋಧಕರಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಲು ಉದ್ಧೇಶಿಸಲಾಗಿದೆ ಎಂಬುದಾಗಿ ಪ್ರೊ. ದೇವಿಕಾ ಮಡಳ್ಳಿ ಹೇಳಿದರು.

ಹಣಕಾಸು ಅಧಿಕಾರಿ, ಎಂ. ಎ. ಸಪ್ನ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು, ಈ ಯೋಜನೆಯಿಂದ ವಿಶ್ವವಿದ್ಯಾಲಯದ ಶೈಕ್ಷಣಿಕ ವಲಯಕ್ಕೆ ಹೇಗೆ ಪ್ರಯೋಜನವಾಗಲಿದೆ ಎಂಬುದನ್ನು ವಿವರಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ, ಕುಲಸಚಿವರಾದ ಸಂತೋಷ ಕಾಮಗೌಡ ಕೆ.ಎ.ಎಸ್‌., ಇವರು ಶೈಕ್ಷಣಿಕ ಸಂಪನ್ಮೂಲಗಳ ಮಹತ್ವವನ್ನು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಇನ್‍ಫ್ಲಿಬ್‌ನೆಟ್ ಕೇಂದ್ರ, ಗಾಂಧಿನಗರ, ಗುಜರಾತ್ ನಡುವೆ ಶೈಕ್ಷಣಿಕ ಸಹಕಾರ ಮತ್ತು ಸಂಶೋಧನೆಗೆ ಅನುಕೂಲವಾಗುವ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಒಪ್ಪಂದ (MOU) ಸಹಿ ಮಾಡಲಾಯಿತು.

ಈ ಕಾರ್ಯಕ್ರಮವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ, ಗ್ರಂಥಪಾಲಕರಾದ ಪ್ರೊ. ವಿನಾಯಕ ಬಂಕಾಪುರ ಇವರು ಸಂಯೋಜಿಸಿದರು. ಉಪ ಗ್ರಂಥಪಾಲಕರಾದ, ಡಾ. ಸುಮನ ಮುದ್ದಾಪೂರ ಸ್ವಾಗತ ಹಾಗೂ ಅತಿಥಿಗಳ ಪರಿಚಯ ನೀಡಿದರು. ಶಿಕ್ಷಣ ವಿಭಾಗದ ಡೀನ್‌ರಾದ ಪ್ರೊ. ಎಂ. ಸಿ. ಯರ್ರಿಸ್ವಾಮಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ. ಕವಿತಾ ಕುಸುಗಲ್ ಮತ್ತು ಪ್ರಸಾರಾಂಗ ನಿರ್ದೇಶಕಿ ಡಾ. ಪೂಜಾ ಹಳ್ಯಾಳ್ ಉಪಸ್ಥಿತರಿದ್ದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕಿರಣ್ ಪಿ. ಸವಣೂರು ವಂದಿಸಿದರು. ಕಾರ್ಯಕ್ರಮವನ್ನು ಲಕ್ಷ್ಮಿ ಕಾಂಬ್ಳೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net