ಸಾಹಿತ್ಯ ಗರತಿ ನಾಡೋಜ ಕಮಲಾ ಹಂಪನಾ :ಕುಲಪತಿ ಪ್ರೊ. ಟಿ. ಎಂ. ಭಾಸ್ಕರ

IMG-20240731-WA0033.jpg
Published on

ಬೆಳಗಾವಿ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತಿçÃಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ಮಹಿಳಾ ಸಬಲೀಕರಣ ಕೋಶ, ಬೆಳಗಾವಿ ಮತ್ತು ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ, ಬೆಳಗಾವಿ ಇವರ ಸಹಯೋಗದಲ್ಲಿ ‘ನಾಡೋಜ ಕಮಲಾ ಹಂಪನಾ ಸಾಹಿತ್ಯ’ ಒಂದು ದಿನದ ವಿಚಾರ ಸಂಕಿರಣವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಬುಧವಾರ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಾವೇರಿಯ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಟಿ. ಎಂ. ಭಾಸ್ಕರ ಅವರು ಸಾಹಿತ್ಯ ಗರತಿ ನಾಡೋಜ ಕಮಲಾ ಹಂಪನಾ ಎನ್ನುತ್ತಾ, ಅವರ ಬದುಕು ಮತ್ತು ಸಾಹಿತ್ಯದ ವಿರಾಟ್ ಸ್ವರೂಪವನ್ನು ತಮ್ಮದೇ ಜನಪದ ಸೊಗಡಿನಿಂದ ವಿವರಿಸಿಕೊಳ್ಳುತ್ತಾ, ಹಂಪನಾ ಅವರು ತಮ್ಮ ಸಾಹಿತ್ಯ ಕೃಷಿ ಮತ್ತು ಕೌಟುಂಬಿಕ ಬದುಕನ್ನು ಜೊತೆಯಾಗಿ ನಡೆಸಿಕೊಂಡು ಹೋಗುವ ಸಂದರ್ಭದಲ್ಲಿ ಎರಡನ್ನು ಸಮ ಪ್ರಮಾಣದಲ್ಲಿ ಕಟ್ಟಿಕೊಳ್ಳುವ ಪ್ರಯತ್ನ ಮಾಡಿದರು. ಹಂಪನಾ ಅಂತಹ ದೊಡ್ಡ ಆಲದ ಮರದ ನೆರಳಲ್ಲಿ ಇನ್ನೊಂದು ಆಲದ ಮರದ ಹಾಗೆ ಸಾಹಿತ್ಯವನ್ನು ಬೆಳೆಸಿ ಮಹಿಳೆಯೊಬ್ಬಳು ಶ್ರಮಪಟ್ಟರೆ, ಸಾಹಿತ್ಯದಲ್ಲಿ ತನ್ನ ಸಾಧನೆಯನ್ನು ಸಾದರಪಡಿಸಬಹುದೆಂಬುದಕ್ಕೆ ಸಾಕ್ಷಿ ಪ್ರಜ್ಞರಾಗಿದ್ದಾರೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಅವರು ಮಹಿಳೆಯರು ವೃತ್ತಿ ಮತ್ತು ಪ್ರವೃತ್ತಿಯ ಬಗ್ಗೆ ಸದಾ ಜಾಗೃತರಾಗಿರಬೇಕು. ಸೃಜನಶೀಲ ಮತ್ತು ಸಂಶೋಧನಾ ಬರಹದ ಮೂಲಕ ತಮ್ಮ ಅಧ್ಯಾಪನವನ್ನು ಸದೃಢಗೊಳಿಸಿಕೊಂಡು ವಿಧ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಅವರಲ್ಲಿ ಚೈತನ್ಯವನ್ನು ತುಂಬುವ ಚಲನಶೀಲ ಗುಣಗಳನ್ನು ಹೊಂದಿದರೆ ಉನ್ನತ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ತಮ್ಮ ಬದುಕಿನ ದಾರಿಗಳನ್ನು ಮತ್ತು ಅನ್ನದ ಅರಿವನ್ನು ಪಡೆದುಕೊಳ್ಳುತ್ತಾರೆ. ನಾಡೋಜ ಕಮಲಾ ಹಂಪನಾ ಅವರ ಬದುಕು ಮತ್ತು ಸಾಹಿತ್ಯ ಈ ನೆಲೆಯಲ್ಲಿ ನಮಗೆ ಆದರ್ಶವಾದಾಗ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣಗೊಳ್ಳುತ್ತದೆ ಎಂದು ಕಿವಿ ಮಾತನ್ನು ಹೇಳಿದರು.

ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀಮತಿ ರಾಜಶ್ರೀ ಜೈನಾಪೂರ ಅವರು ಮಾತನಾಡುತ್ತಾ ಸಾಹಿತ್ಯದ ಜೊತಗಿನ ಸಂಬAಧ ನಮ್ಮನ್ನು ಸದಾ ವೈಚಾರಿಕ ಪ್ರಜ್ಞೆಯ ಕಡೆಗೆ ಕರೆದ್ಯೊಯ್ಯುತ್ತದೆ ಎನ್ನುತ್ತಾ ವಿದ್ಯಾರ್ಥಿಗಳು ಪಠ್ಯ ಮತ್ತು ಇತರ ಸಾಹಿತ್ಯದ ಜೊತೆಗೆ ಸದಾ ಅನುಸಂಧಾನದಲ್ಲಿ ತೊಡಗಬೇಕೆಂದು ಕರೆಕೊಟ್ಟರು. ಕಾರ್ಯಕ್ರಮದ ಸ್ವಾಗತವನ್ನು ಶಾಸ್ತಿçÃಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಗುಂಡಣ್ಣ ಕಲಬುರ್ಗಿ ನಡೆಸಿಕೊಟ್ಟರೆ, ಕರ್ನಾಟಕ ಲೇಖಕಿಯರ ಸಂಘದ ಬೆಳಗಾವಿ ಶಾಖೆಯ ಅಧ್ಯಕ್ಷರಾದ ಡಾ. ಕೆ. ಆರ್. ಸಿದ್ದಗಂಗಮ್ಮಾ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಮಲಾ ಹಂಪನಾ ಅವರ ಸೃಜನ ಸಾಹಿತ್ಯದ ಕುರಿತು ಡಾ. ಗಂಗಾಬಿಕೆ ಬೆಂಗಳೂರು ಇವರು ಪ್ರಬಂಧ ಮಂಡಿಸಿದರು.

ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಕೋಶದ ಅಧ್ಯಕ್ಷರಾದ ಪ್ರೊ. ಕೆ. ಬಿ. ಚಂದ್ರಿಕಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಡಾ. ಗಜಾನನ ನಾಯ್ಕ ನಡೆಸಿಕೊಟ್ಟರೆ, ವಂದನಾರ್ಪಣೆಯನ್ನು ಡಾ. ಪಿ. ನಾಗರಾಜ ನಿರ್ವಹಿಸಿದರು. ಮುಂದುವರೆದು, ಕಾರ್ಯಕ್ರಮದ ಜವಾಬ್ದಾರಿಯನ್ನು ಡಾ. ಶೋಭಾ ನಾಯಕ ವಹಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net