

ಬಳ್ಳಾರಿ: ಇಷ್ಟಾರ್ಥಗಳನ್ನು ಪೂರೈಸು ಎಂದು ದೇವರಲ್ಲಿ ಹಲವರು ಬೇಡಿಕೊಳ್ಳುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಗಣಿ ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳು ಈ ಬಾರಿಯ ಪ್ರೀಮಿಯರ್ ಲೀಗ್‌ನಲ್ಲಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆಲ್ಲಲಿ ಎಂದು ಉತ್ತರ ಕರ್ನಾಟಕದ ಆರಾಧ್ಯ ದೈವ ಜಿಲ್ಲೆಯ ಕೊಟ್ಟೂರೇಶ್ವರ ದೇವರ ಮೊರೆ ಹೋಗಿದ್ದಾರೆ. ಈಚೆಗೆ ಕೊಟ್ಟೂರಿನಲ್ಲಿ ನಡೆದ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಬಾಳೆ ಹಣ್ಣಿನ ಮೇಲೆ ‘ಈ ಬಾರಿ ಕಪ್ ನಮ್ದೆ’ ಎಂದು ದೇವರಿಗೆ ಸಮರ್ಪಣೆ ಮಾಡಿರುವ ಆಸಕ್ತ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕ್ರೀಡಾಭಿಮಾನಿಗಳ ಹರಕೆ ಈ ವರ್ಷವಾದರೂ ಪೂರೈಕೆಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.