

ರಾಯಚೂರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲದ ಘಟನೆಯಲ್ಲಿ ಪ್ರತಿಯೊಬ್ಬರ ತಪ್ಪು ಇದೆ. ಕಾರ್ಯಕ್ರಮ ಆಯೋಜಕರಿಗೆ ಗೊತ್ತಿರಬೇಕಿತ್ತು. ಅಲ್ಲಿ ಎಷ್ಟು ಜನ ಸೇರಬಹುದೆಂದು ಘಟನೆಗೆ ಪ್ರಮುಖ ಕಾರಣವೇ ಇದಾಗಿದೆಂದು ಗೌರಿಗದ್ದೆ ಆಶ್ರಮದ ಶ್ರೀ ವಿನಯ ಗುರೂಜಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕಪ್‌ನ್ನು ಮರಳಿ ಪಡೆಯಬಹುದಾಗಿದೆ ಆದರೆ ಜೀವ ಹೋದ ನಂತರ ಮರಳಿ ಪಡೆಯಲು ಸಾಧ್ಯವಿಲ್ಲ. ಅಭಿಮಾನಿಗಳ ಅಭಿಮಾನ ಅತಿರೇಕಕ್ಕೆ ತಲುಪಿದರೆ ಅದು ಅಜ್ಞಾನವಾಗುತ್ತದೆ ಆದ್ದರಿಂದ ಅಭಿಮಾನ ಸೀಮಿತವಾಗಿರಬೇಕು. ಜೀವ ಕಳೆದುಕೊಂಡ ಕುಟುಂಬದವರಿಗೆ ಆ ನೋವು ತಿಳಿದಿದೆ.
ಶೋಕದಲ್ಲಿ ದೊಡ್ಡ ಶೋಕವೆಂದರೆ ಅದು ಪುತ್ರ ಶೋಕ. ಆ ಶೋಕದಲ್ಲಿರುವ ತಂದೆ ತಾಯಿಯರಿಗೆ ನೋವು ಗೊತ್ತಿರುತ್ತದೆ. ಯಾವುದೇ ಆರ್ಥಿಕ ಪರಿಹಾರದಿಂದ ನೋವನ್ನು ಭರಿಸಲು ಸಾಧ್ಯವಿಲ್ಲ. ಇಂತಹ ದುರಂತಗಳು ಮುಂದೆ ಆಗಬಾರದೆಂದರೆ ಅಭಿಮಾನದಲ್ಲಿ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳುವ ಕೆಲಸವನ್ನು ಯುವಕರು ಮಾಡಬೇಕಾಗಿದೆ. ಅಭಿಮಾನ ಅವಿವೇಕ ಆಗಬಾರದು. ನೋವನ್ನು ಯಾವುದೇ ಮಾತಿನಿಂದ, ಆರೋಪ ಪ್ರತ್ಯಾರೋಪಗಳಿಂದ ತರಲಿಕ್ಕೆ ಆಗುವುದಿಲ್ಲ. ಈ ಘಟನೆ ಪ್ರತಿಯೊಂದು ಪಕ್ಷಕ್ಕೂ ಪಾಠವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಎನ್.ಶಿವಶಂಕರ, ಲಕ್ಷ್ಮೀಪತಿ ಗಾಣಧಾಳ, ಭಾಸ್ಕರ ಬಾಬು, ದತ್ತಾತ್ರೇಯ ಇದ್ದರು.