ಅಂಧ ಮಕ್ಕಳ ಶಾಲೆಗೆ ಆರ್​ಬಿಐ ಎಜಿಎಂ ಭೇಟಿ

11sdp1
Published on

ಸಿದ್ದಾಪುರ: ಪಟ್ಟಣದ ಹಾಲದಕಟ್ಟಾದ ಆಶಾಕಿರಣ ಟ್ರಸ್ಟ್​ನ ಮುರುಘರಾಜೇಂದ್ರ ಅಂಧ ಮಕ್ಕಳ ಶಾಲೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಎಜಿಎಂ ಮೋನಿರಾಜ್, ಜಿಲ್ಲಾ ನೋಡಲ್ ಅಧಿಕಾರಿ ಭಾರತಿ ವಶಿಷ್ಠ ಮತ್ತು ಬೆಂಗಳೂರು ಶಾಖೆ ಮ್ಯಾನೇಜರ್ ಸುನೀಲ್ ಇವರು ಶುಕ್ರವಾರ ಭೇಟಿ ನೀಡಿ ಹಣಕಾಸು ಸಾಕ್ಷರತೆ ಹಾಗೂ ಬ್ಯಾಂಕ್ ವ್ಯವಹಾರಗಳ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಊಟದ ಪ್ಲೇಟ್ ಹಾಗೂ ಲೋಟಗಳನ್ನು ವಿತರಿಸಿದರು.

ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನಮನೆ ಸ್ವಾಗತಿಸಿ ಸಂಸ್ಥೆಯ ಕುರಿತು ಮಾಹಿತಿ ನೀಡಿದರು. ಸಿದ್ದಾಪುರ ಕೆನರಾ ಬ್ಯಾಂಕ್ ಮ್ಯಾನೇಜರ್ ಲೋಹಿತ್, ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ,ಆಶಾಕಿರಣ ಟ್ರಸ್ಟ್ ಉಪಾದ್ಯಕ್ಷ ಸಿ.ಎಸ್. ಗೌಡರ್ ಉಪಸ್ಥಿತರಿದ್ದರು. ಲತಾ ಮಡಿವಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net