ದಾರಿ ತಪ್ಪುತ್ತಿರುವ ಯುವ ರೈತರು: ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಕಳವಳ

22_11_Mdy_04(Raytha Sanga)
Published on

ಮಂಡ್ಯ: ಕೆಲ ಹಣವಂತರು ಯುವಕರಿಗೆ ಆಸೆ ಆಮಿಷಗಳನ್ನು ತೋರಿಸಿ ಮುಂದೆ ಅವರನ್ನು ಸಂಕಷ್ಟ ಅನುಭವಿಸುವಂತೆ ಮಾಡುತ್ತಿರುವುದು ದುರಂತ ಎಂದು ರೈತ ಸಂಘ(ಮೂಲಸಂಘಟನೆ)ದ ನೂತನ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರೈತ ಯುವಕರನ್ನು ಸಂಘಟನೆಯಲ್ಲಿ ತೊಡಗಿಸುವುದು ಕಷ್ಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮೋಜು ಮಸ್ತಿಗಳಿಗಷ್ಟೇ ಮೀಸಲು ಇರುವಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಅಡ್ಡದಾರಿ ಹಿಡಿಯುತ್ತಿದ್ದಾರೆ. ಇವರನ್ನು ಸರಿದಾರಿಗೆ ತರುವುದು ಚಿಂತಕರ ಕರ್ತವ್ಯವಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ದೊಡ್ಡಪಾಳ್ಯ ಮಂಜೇಶ್‌ಗೌಡ ಮಾತನಾಡಿ, ಚಳವಳಿಗೆ ಒತ್ತು ಕೊಡುವುದು ಹಾಗೂ ಹೋರಾಟ ನಡೆಸುವುದು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಎಲ್ಲಿ ನಮ್ಮಲ್ಲಿ ಲೋಪ ಆಗಿದೆ ಎಂಬುದನ್ನು ಕಂಡುಕೊಳ್ಳಬೇಕಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷ ಬೋರಾಪುರ ಶಂಕರೇಗೌಡ, ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ, ಮುಖಂಡರಾದ ಕೀಲಾರ ಸೋಮಶೇಖರ್, ಪಣಕನಹಳ್ಳಿ ಬೋರಲಿಂಗೇಗೌಡ, ಶಿವಾರ ರಾಮಕೃಷ್ಣ, ಬೇವಿನಹಳ್ಳಿ ಗದ್ದಯ್ಯ, ಸುಂಡಹಳ್ಳಿ ಗೋಪಿನಾಥ್, ಕೋಣನಹಳ್ಳಿ ಜವರೇಗೌಡ, ದೊಡ್ಡಪಾಳ್ಳ ಚಂದ್ರಶೇಖರ್, ಬಸವರಾಜು, ಕೊತ್ನಹಳ್ಳಿ ಉಮೇಶ್, ಪ್ರಕಾಶ್ ಇತರರಿದ್ದರು.

ನೂತನ ಪದಾಧಿಕಾರಿಗಳು: ಇಂಡುವಾಳು ಚಂದ್ರಶೇಖರ್ (ಅಧ್ಯಕ್ಷ), ದೊಡ್ಡಪಾಳ್ಯ ಮಂಜೇಶ್‌ಗೌಡ (ಪ್ರಧಾನ ಕಾರ್ಯದರ್ಶಿ), ಹಿಟ್ಟನಹಳ್ಳಿ ಶಿವರುದ್ರ, ಬಿಂಡಗನವಿಲೆ ವೆಂಕಟೇಶ್, ಕುರಿಕೆಂಪನದೊಡ್ಡಿ ರಾಮಲಿಂಗೇಗೌಡ, ಕೂಡಲಕುಪ್ಪೆ ನಾಗೇಂದ್ರಸ್ವಾಮಿ(ಉಪಾಧ್ಯಕ್ಷ), ಎಚ್.ಜಿ. ಪ್ರಭುಲಿಂಗು (ಖಜಾಂಚಿ), ರಾಮೇಗೌಡ ಯಡಗನಹಳ್ಳಿ(ಕಾರ್ಯದರ್ಶಿ), ಮಹೇಶ್ (ಸಂಘಟನಾ ಕಾರ್ಯದರ್ಶಿ)ಯಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net