ಕನಸಿನ ಮಂಡ್ಯ ನಿರ್ಮಾಣಕ್ಕೆ ಸಹಕರಿಸಿ: ಸರ್ವೋದಯ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಮನವಿ

Raytha Sanga)
Published on

ಮಂಡ್ಯ: ಚುನಾವಣೆ ಸಮಯದಲ್ಲಿ ಜನರ ಬಳಿ ಬಂದು ಮುಖ ತೋರಿಸಿ ಮತದಾನದ ಬಳಿಕ ಕ್ಷೇತ್ರವನ್ನು ಮರೆಯುವ ಜಾಯಮಾನದವನಲ್ಲ ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಹೇಳಿದರು.

ತಾಲೂಕಿನ ಕೆರಗೋಡು ಗ್ರಾಮದಲ್ಲಿ ಮತಯಾಚನೆ ವೇಳೆ ಮಾತನಾಡಿದ ಅವರು, ಯಾವುದೇ ಅಧಿಕಾರ ಇಲ್ಲದಿದ್ದರೂ ಜನಸಾಮಾನ್ಯರು, ರೈತರ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಕ್ಷೇತ್ರದ ಪ್ರತಿ ಸಮಸ್ಯೆಗಳನ್ನು ಅರಿತಿದ್ದೇನೆ. ಕೃಷಿ ಕಾರ್ಮಿಕನಿಂದ ಹಿಡಿದು ಪದವೀಧರ ಯುವಸಮೂಹ ಅನುಭವಿಸುತ್ತಿರುವ ಬವಣೆ ಏನೆಂಬುದು ತುಂಬಾ ಹತ್ತಿರದಿಂದ ಬಲ್ಲವನಾಗಿದ್ದೇನೆ. ನನ್ನ ಕನಸಿನ ಮಂಡ್ಯವನ್ನು ಕಟ್ಟಲು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ ಎಂದು ಮನವಿ ಮಾಡಿದರು.

ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಅವರಿದ್ದಾಗ ರೈತರ ಸಮಸ್ಯೆಗಳಿಗೆ ದನಿಯಾಗಿ ಸರ್ಕಾರ ಹಾಗೂ ಆಡಳಿತ ವರ್ಗದ ಕಿವಿಯಿಂಡುವ ಕೆಲಸ ಮಾಡುತ್ತಿದ್ದವರು. ಆದ್ದರಿಂದ ಅವರಂತೆಯೇ ಹೋರಾಟದ ಮನೋಭಾವವುಳ್ಳ ಮಧುಚಂದನ್ ಅವರನ್ನು ಗೆಲ್ಲಿಸಲು ಸಹಕರಿಸಿ ಎಂದರು.

ರಾಜ್ಯ ರೈತ ಸಂಘದ ಖಜಾಂಚಿ ಪ್ರಸನ್ನಗೌಡ ತಗ್ಗಹಳ್ಳಿ, ಹುಲಿವಾನ ಜಗದೀಶ್, ಶ್ರೀಕಾಂತ್, ಚಂದ್ರು ಇತರರಿದ್ದರು. ಇದೇ ವೇಳೆ ಮಧುಚಂದನ್ ಅವರನ್ನು ಎತ್ತಿನಗಾಡಿ ಮೂಲಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net