ಪಕ್ಷ ಭೇದ ಮರೆತು ರೈತರನ್ನು ಬೆಂಬಲಿಸೋಣ: ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಎನ್.ಯೋಗೇಶ್ ಕರೆ

15_11_Mdy_01(A(Raytha Sanga)
Published on

ಮಂಡ್ಯ: ರೈತರು ದೇಶದ ಬೆನ್ನೆಲುಬು. ರೈತ ಆಹಾರ ಬೆಳೆದರೆ ಮಾತ್ರ ನಮ್ಮ ಬದುಕು. ಇಂತಹ ರೈತರ ಸಮಸ್ಯೆಗಳಿಗೆ ಪಕ್ಷಭೇದ ಮರೆತು ಬೆಂಬಲಿಸೋಣ ಎಂದು ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಎನ್.ಯೋಗೇಶ್ ಕರೆ ನೀಡಿದರು.

ನಗರದ ಸರ್ ಎಂವಿ ಪ್ರತಿಮೆ ಮುಂಭಾಗ ರೈತರು ನಡೆಸುತ್ತಿರುವ 9ನೇ ದಿನದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ, ಇಂದು ರೈತನ ಬದುಕು ಸಾಲದಲ್ಲಿ ಮುಳುಗಿ ಹೋಗಿದೆ. ತನ್ನ ಬದುಕು, ಆರೋಗ್ಯ, ಮಕ್ಕಳ ಶಿಕ್ಷಣದ ಖರ್ಚು-ವೆಚ್ಚಗಳ ಹೊಂದಾಣಿಕೆಗೆ ಪ್ರಯಾಸಪಡಬೇಕಾಗಿದೆ. ಸರ್ಕಾರಗಳು ಜಿಎಸ್‌ಟಿ ಮೂಲಕ ಸಂಗ್ರಹಿಸುತ್ತಿರುವ ಸಾವಿರಾರು ಕೋಟಿ ರೂ ತೆರಿಗೆ ಎಲ್ಲಿ ಹೋಗುತ್ತಿದೆ. ಉದ್ಯಮಿಗಳ ಪರ ನಿಲ್ಲುವ ಸರ್ಕಾರ, ರೈತರಿಗೆ ನೆರವು ನೀಡಿದರೆ ಏನೂ ಆಗುವುದಿಲ್ಲ. ರೈತರ ಕಡೆಗಣನೆ, ಅಸಡ್ಡೆ ಶೋಭೆ ತರುವುದಿಲ್ಲ. ಇದೇ ರೀತಿ ರೈತರನ್ನು ಕಡೆಗಣಿಸುತ್ತಾ ಬಂದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net