ರಾಯರ ಸುವರ್ಣ ಆರಾಧನಾ ಮಹೋತ್ಸವ

raya
ಶಿವಪುರ ಪಾಂಡುಕಲ್ಲು ಪುಟ್ಟಾಭಿಯಲ್ಲಿ ಬಡ್ಕಿಲ್ಲಾಯ ವಂಶದ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಸಮಿತಿ ವತಿಯಿಂದ ಬುಧವಾರ ಸುವರ್ಣ ಆರಾಧನಾ ಮಹೋತ್ಸವ ನಡೆಯಿತು.
Published on

ಹೆಬ್ರಿ: ಶಿವಪುರ ಪಾಂಡುಕಲ್ಲು ಪುಟ್ಟಾಭಿಯಲ್ಲಿ ಬಡ್ಕಿಲ್ಲಾಯ ವಂಶದ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಸಮಿತಿ ವತಿಯಿಂದ ಬುಧವಾರ ಸುವರ್ಣ ಆರಾಧನಾ ಮಹೋತ್ಸವ ನಡೆಯಿತು.

ಹರಿದಾಸ ಡಾ.ಎಸ್.ಪಿ.ಗುರುದಾಸ ಮಂಗಳೂರು ಅವರಿಂದ ಶ್ರೀ ರಾಯರ ಕೃಪಾ ವೈಭವ ಸಾರುವ ಹರಿಕಥೆ ನಡೆಯಿತು. ಉದಯ ಸೇರಿಗಾರ ಪಾಂಡು ಕಲ್ಲು ಅವರಿಂದ ಸ್ಯಾಕ್ಸೋಫೋನ್ ಕಚೇರಿ ನಡೆಯಿತು. ಸ್ಥಾನೀಯ ಪ್ರತಿಭಾವಂತರಾದ ಪಾಂಡುಕಲ್ಲು ವೇದಮೂರ್ತಿ, ಧಾರ್ಮಿಕ ಕ್ಷೇತ್ರ ನರಸಿಂಹ ಭಟ್ಟ, ಪಾಕಶಾಸ್ತ್ರ ಕ್ಷೇತ್ರ ಬಾಲಕೃಷ್ಣ ಭಟ್ಟ, ಗೃಹ ಪರಿಚಾರಕ ಕ್ಷೇತ್ರದ ಅನುರಾಧಾ ಎ.ಸೇರಿಗಾರ, ಕೃಷಿ ಕಾಯಕ ಕ್ಷೇತ್ರ ಸುಂದರ ಕುಲಾಲ, ಹರಿಕಥಾ ಕ್ಷೇತ್ರ ಡಾ.ಎಸ್.ಪಿ.ಗುರುದಾಸ ಮಂಗಳೂರು ಅವರನ್ನು ಸನ್ಮಾನಿಸಲಾಯಿತು. ಹರಿದಾಸ ಬಿ.ಸಿ.ರಾವ್ ಶಿವಪುರ ಧಾರ್ಮಿಕ ಸಂದೇಶ ನೀಡಿದರು. ಸಮಿತಿ ಸಂಚಾಲಕರಾದ ಡಾ.ಬಡ್ಕಿಲ್ಲಾಯ ರಾಘವೇಂದ್ರ ರಾವ್, ಡಾ.ಪ್ರತಿಮಾ.ಆರ್.ರಾವ್, ಸಮಿತಿ ಪ್ರಮುಖರು, ಸದಸ್ಯರು, ಬಡ್ಕಿಲ್ಲಾಯ ವಂಶದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net