ಜಯಘೋಷಗಳೊಂದಿಗೆ ಸಾಗಿದ ರಾಯರ ತೇರು

2bdvt2
ಭದ್ರಾವತಿ ಜನ್ನಾಪುರದ ರಾಯರ ಮಠದಲ್ಲಿ ಗುರು ಸಾರ್ವಭೌಮರ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
Published on

ಭದ್ರಾವತಿ: ಗುರು ರಾಯರ ಆರಾಧನಾ ಮಹೋತ್ಸವದ ಕೊನೆಯ ದಿನವಾದ ಶನಿವಾರ ಜನ್ನಾಪುರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ಸಾರ್ವಭೌಮರ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಜಯಘೋಷಗಳೊಂದಿಗೆ ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು. ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ಪಂಡಿತ ಕುಷ್ಟಗಿ ವಾಸುದೇವಮೂರ್ತಿ, ಘಂಟಿ ನಾರಾಯಣಾಚಾರ್, ಮೃತ್ತಿಕಾ ಗುರುರಾಜಾಚಾರ್ ರಾಯರ ಜೀವನಕ್ರಮ ಕುರಿತು ಪ್ರವಚನ ನೀಡಿದರು.
ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಮಯ ನಡೆಯಿತು. ಪ್ರಮುಖರಾದ ಎಲ್.ಜಿ.ಜಯತೀರ್ಥ, ರಾಮಚಂದ್ರಚಾರ್ ಕಲ್ಲಾಪುರ, ಆನಂದತೀರ್ಥ, ಕೆ.ಹನುಮಂತರಾವ್, ಸಿ.ಜಿ.ನಾಗರಾಜ್, ಅನಿಲ್ ಜೋಶಿ, ಶ್ರೀಧರ್, ಶ್ರೀ ಭಾರತೀ ಭಜನಾ ಮಂಡಳಿಯ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net