

ಅಥಣಿ: ಪಟ್ಟಣದ ರಾಘವೇಂದ್ರಸ್ವಾಮಿ ಮಠದಲ್ಲಿ ಶುಕ್ರವಾರ ರಾಘವೇಂದ್ರ ಸ್ವಾಮೀಜಿ ಆರಾಧನೆ ಕೊನೆಯ ದಿನದ ಅಂಗವಾಗಿ ಸಾವಿರಾರು ಭಕ್ತರ ಜಯಘೋಷದ ಮಧ್ಯೆ ರಥೋತ್ಸವ ಸಡಗರದಿಂದ ಜರುಗಿತು.
ಮೂರು ದಿನ ಜರುಗಿದ ಆರಾಧನಾ ಮಹೋತ್ಸವ ಭಕ್ತರಲ್ಲಿ ಸಂಭ್ರಮ ತಂದಿತು. ಬಗೆಬಗೆಯ ಹೂಗಳು ಹಾಗೂ ಬಾಳೆ ದಿಂಡು, ತೆಂಗಿನ ಗರಿಗಳಿಂದ ರಥ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಹೋಮ ಹವನ, ಪೂರ್ಣಾಹುತಿ ಜರುಗಿತು.
ಭಕ್ತರು ರಥಕ್ಕೆ ಉತ್ತತ್ತಿ, ಹಣ್ಣುಗಳನ್ನು ಸಮರ್ಪಿಸಿದರು. ಶ್ರೀ ಸುಧಾ ಭಜನಾ ಮಂಡಳ ಸದಸ್ಯೆಯರು ಹಾಗೂ ಚಿಕ್ಕಮಕ್ಕಳಿಂದ ಕೋಲಾಟ ಜರುಗಿತು. ರಥೋತ್ಸವದ ಬಳಿಕ ಅನ್ನಪ್ರಸಾದ ಸೇವೆ ಜರುಗಿತು. ಭಕ್ತರಾದ ರಾಜು ಪಾಟೀಲ, ಎಸ್.ವಿ.ಜೋಶಿ, ಅನಿಲ ದೇಶಪಾಂಡೆ, ಲಕ್ಷ್ಮೀಕಾಂತ ಕುಲಕರ್ಣಿ, ಅನಿಲ ದೇಶಪಾಂಡೆ, ಶ್ರೀನಿವಾಸ ಬಿಳ್ಳೂರ, ಗೋಪಾಲ ಪಾಟೀಲ ಇತರರಿದ್ದರು.