

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಪುರಂದರ ಮಂಟಪದಲ್ಲಿ ರಾಯರ ಮಧ್ಯಾರಾಧನೆಯನ್ನು ಬುಧವಾರ ಸಂಭ್ರಮದದಿ0ದ ಆಚರಿಸಯಿತು. ಪಂ. ಜಿ.ವಿ. ನವಲಗುಂದ ಅವರಿಂದ ರಾಯರಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ, ಪ್ರವಚನ ನಡೆದವು. ಸಂಗೀತ ನಿರ್ದೇಶಕ ಶ್ರೀಧರರಾವ್ ಅವರ ದಾಸವಾಣಿ, ಅಷ್ಟೋತ್ತರ ಪಾರಾಯಣ, ಸೌಭಾಗ್ಯ ಭಜನಾ ಮಂಡಳಿಯಿ0 ದ ದಾಸರ ಕೀರ್ತನ ಪ್ರಸ್ತುತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಧರ್ಮದರ್ಶಿ ಸಿ. ನಾಗರಾಜ, ಪುರೋಹಿತರಾದ ವಿಜಯ ವಿಠ್ಠಲ ಆಚಾರ್, ಅಪರಂಜಿ, ಆರ್.ಜಿ. ಕುಲಕರ್ಣಿ, ರಜನಿ ಕುಲಕರ್ಣಿ, ವೇದವತಿ ನಾಗರಾಜ, ಇತರರಿದ್ದರು.