ರಾಯರ ಆರಾಧನಾ ಮಹೋತ್ಸವ ಸಂಪನ್ನ

aradhane
ರಾಯರ ಆರಾಧನೆ ಅಂಗವಾಗಿ ಶನಿವಾರ ಶಿವಮೊಗ್ಗ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದಲ್ಲಿ ರಥೋತ್ಸವ ನೆರವೇರಿತು
Published on

ಶಿವಮೊಗ್ಗ: ರಾಘವೇಂದ್ರ ಸ್ವಾಮಿಗಳ 352ನೇ ವರ್ಷದ ಆರಾಧನಾ ಮಹೋತ್ಸವದ ಉತ್ತರಾರಾಧನೆ ಅಂಗವಾಗಿ ಜಿಲ್ಲೆಯ ವಿವಿಧೆಡೆ ರಾಯರ ಮಠಗಳಲ್ಲಿ ಶನಿವಾರ ಮಹಾರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಶಿವಮೊಗ್ಗ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಗ್ಗೆಯಿಂದಲೇ ರಾಯರಿಗೆ ಅಷ್ಟೋತ್ತರ ಅಭಿಷೇಕ, ಫಲ ಪಂಚಾಮೃತ ಅಭಿಷೇಕ, ರಜತ ಕವಚ ಸೇವೆ, ಉಯ್ಯಲೆ ಸೇವೆ, ಸರ್ವ ಸೇವೆ, ಮಹಾ ಪೂಜೆ, ಬೆಳ್ಳಿ ರಥೋತ್ಸವ ಸೇವೆ, ಅಷ್ಟಾವಧಾನ ಸೇವೆಗಳು ನೆರವೇರಿದವು.
ಮಹಾ ರಥೋತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡು ತೇರನ್ನೆಳೆದು ಧನ್ಯತಾಭಾವ ಹೊಂದಿದರು. ರಾಯರ ಆರಾಧನೆ ಪ್ರಯುಕ್ತ ವಿವಿಧ ಭಜನಾ ತಂಡಗಳು ಹಾಗೂ ಭಕ್ತಾದಿಗಳು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಶಿವಮೊಗ್ಗದ ಕೆ.ಆರ್.ಪುರಂ ಹಾಗೂ ಪಲ್ಲಕ್ಕಿ ರಾಯರ ಮಠ, ಮಂಜುನಾಥ ಬಡಾವಣೆಯ ರಾಯರ ಮಠದಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೂರಾರು ಮಂದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಬೊಮ್ಮನಕಟ್ಟೆಯ ದೇವಂಗಿ ರತ್ನಾಕರ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಪಲ್ಲಕ್ಕಿ ಸೇವೆ, ಅಷ್ಟಾವಧಾನ ಸೇವೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net