

ಗುಂಡ್ಲುಪೇಟೆ: ಶ್ರೀ ಗುರು ರಾಘವೇಂದ್ರಸ್ವಾಮಿಗಳ 354ನೇ ಆರಾಧಾನಾ ಮಹೋತ್ಸವದ ಅಂಗವಾಗಿ ಪಟ್ಟಣದ ಶ್ರೀ ರಾಘವೇಂದ್ರ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಆ.10ರಿಂದ 12ರ ವರೆಗೆ ವಿವಿಧ ಪೂಜಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಆ.10ರಂದು ಪೂರ್ವಾರಾಧನೆ ಅಂಗವಾಗಿ ಬೆಳಗ್ಗೆ ನಾನಾ ಧಾರ್ಮಿಕ ಕಾರ್ಯಕ್ರಮ, ಸರಿಗಮಪ ಖ್ಯಾತಿಯ ಗಾಯಕಿ ಕು.ಯೋಗಶ್ರೀ ಅವರಿಂದ ದಾಸವಾಣಿ, ಆಕಾಶವಾಣಿಯ ಕಲಾವಿದರಾದ ಎ.ಡಿ.ಶ್ರೀನಿವಾಸನ್ ಮತ್ತು ವಿದುಷಿ ಇಂದ್ರಾಣಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ದೇವರ ನಾಮಸ್ಮರಣೆ, 11ರಂದು ಸೋಮವಾರ ಮದ್ಯಾರಾಧನೆ ಅಂಗವಾಗಿ ಹೆಸರಾಂತ ಕಲಾವಿದರಿಂದ ಭಕ್ತಿಗಾನಸುಧಾ ಮತ್ತು ರಮ್ಯ ರಾಘವೇಂದ್ರ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ, 12ರ ಮಂಗಳವಾರ ಉತ್ತರಾರಾಧನೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಘವೇಂದ್ರಸ್ವಾಮಿ ಅವರ ಭಾವಚಿತ್ರದ ಮೆರವಣಿಗೆ ಹಾಗೂ ಮಧ್ಯಾಹ್ನ ಪ್ರಸಾದ ವಿತರಣೆ ಆಯೋಜಿಸಲಾಗಿದೆ ಎಂದು ಆರಾಧನಾ ಸಮಿತಿಯ ರಾಜೇಶ್ವರಿ ಚಂದ್ರಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.