

ಹುಬ್ಬಳ್ಳಿ: ಸಮೀಪದ ರಾಯಾಪುರದಲ್ಲಿರುವ ಶ್ರೀ ಸದ್ಗುರು ಸದಾನಂದ ಬಾಬಾ ಅವರ ಆಶ್ರಮದಲ್ಲಿ ಬಾಬಾ ಅವರ 30ನೇ ಪುಣ್ಯ ಸ್ಮರಣೋತ್ಸವ ಫೆ. 21ರಂದು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10ಕ್ಕೆ ಕರ್ತೃ ಗದ್ದುಗೆಗೆ ಪೂಜೆ, ಪಾದುಕಾಭಿಷೇಕ ಹಾಗೂ ಭಜನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಆರತಿ ನಂತರ ಮಹಾಪ್ರಸಾದ, ಸಂಜೆ 5.30ಕ್ಕೆ ತೆಪ್ಪೋತ್ಸವ ಜರುಗಲಿದೆ.
ಸಂಜೆ 7ಕ್ಕೆ ಭಜನೆ, ಆರತಿ ನಂತರ ಪ್ರಸಾದ, ಅಹೋರಾತ್ರಿ ಅಖಂಡ ಜಾಗರಣೆ ಆಯೋಜಿಸಲಾಗಿದೆ ಎಂದು ಭಕ್ತ ಮಂಡಳಿ ಪ್ರಕಟಣೆ ತಿಳಿಸಿದೆ.