ರಾಯಣ್ಣ ದೇಶಪ್ರೇಮ ಸರ್ವರಿಗೂ ಆದರ್ಶ

Rayanna's patriotism is an example for everyone.
Published on

ವಿಜಯಪುರ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ದೇಶಪ್ರೇಮ, ಹೋರಾಟದ ಕಿಚ್ಚು ಸದಾ ಆದರ್ಶವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ಮತ್ತು ಬಬಲೇಶ್ವರ ತಾಲೂಕಿನ ಕಾಖಂಡಕಿ ಬಳಿಯ ಅಗಸನಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಸಂಗೊಳ್ಳಿ ರಾಯಣ್ಣ ನಾಡಿನ ಏಕತೆ ಮತ್ತು ಸ್ವಾಭಿಮಾನದ ಶಾಶ್ವತ ಸಂಕೇತ. ಕಿತ್ತೂರು ಸಂಸ್ಥಾನ ಕಾಪಾಡುವಲ್ಲಿ ಸಂಗೊಳ್ಳಿ ರಾಯಣ್ಣಅವರು ರಾಣಿ ಚನ್ನಮ್ಮನವರ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು. ಅವರ ಶೌರ್ಯ ಮತ್ತು ದೇಶಭಕ್ತಿಯ ಸಂದೇಶಗಳು ಮುಂದಿನ ಪೀಳಿಗೆಗಳಿಗೆ ಪ್ರೇರಣೆ ಮತ್ತು ಆದರ್ಶವಾಗಿವೆ.

ಅವರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಲಾಗದು. ಅವರು ಎಲ್ಲರ ಹೃದಯದಲ್ಲೂ ನೆಲೆಸಿರುವ ನಾಡಿನ ವೀರಪುತ್ರ. ರಾಯಣ್ಣನವರ ವ್ಯಕ್ತಿತ್ವ ಹಾಗೂ ಆದರ್ಶಗಳು ಎಲ್ಲ ಸಮುದಾಯಗಳಿಗೂ, ಎಲ್ಲ ಕಾಲಕ್ಕೂ ಮಾರ್ಗದರ್ಶಿಯಾಗಿದೆ ಎಂದು ಸಚಿವರು ಹೇಳಿದರು.ರತ್ನಾಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮದಕೊಂಡ ಮಹಾರಾಜರು, ಹುಲಜಂತಿ ಮಾಳಿಂಗರಾಯರು, ತಿಕೋಟಾ ಬ್ಲಾಕ್​ ಕಾಂಗ್ರೆಸ್​ ಅಧ್ಯ ಸಿದ್ದು ಗೌಡನವರ, ಮುಖಂಡರಾದ ಜಕ್ಕಪ್ಪ ಯಡವೆ, ಆರ್​.ಜಿ. ಯರನಾಳ, ರಾಜು ಕಂಬೋಗಿ, ರವಿ ಬಿದರಿ, ಲೇಪು ಕೊಣ್ಣೂರ, ರಾಮಜಿ ಮೀಸಾಳ, ಈಶ್ವರ ದಳವಾಯಿ, ಚಂದ್ರಕಾಂತ ಒಡೆಯರ ಮತ್ತಿತರರಿದ್ದರು.

ಅಗಸನಹಳ್ಳಿ ಗ್ರಾಮದ ಕಾರ್ಯಕ್ರಮದಲ್ಲಿ ಮುಖಂಡರಾದ ರಾಮನಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಸೋಮು ಹಿರೇಕುರಬರ, ಮಲ್ಲು ಪರಸಣ್ಣವರ, ಅಲ್ಲಿಸಾಬ ಖಡಕೆ, ಪ್ರಕಾಶ ಹೂಗಾರಕರ, ಸುರೇಶ ಸೀತಿಮನಿ, ಭೀಮಶಿ ತಳೇವಾಡ, ಮಲ್ಲು ಹಿರೇಕುರಬರ, ಚಾಂದಸಾಬ ಇನಾಮದಾರ, ಮಾಳಪ್ಪ ಸಿದ್ನಾತ, ಶೇಖು ಲೆಂಕಪ್ಪಗೋಳ ಮತ್ತಿತರರಿದ್ದರು.

ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಮದಕೊಂಡ ಮಹಾರಾಜರು, ಹುಲಜಂತಿ ಮಾಳಿಂಗರಾಯರು, ಸಿದ್ದು ಗೌಡನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net