ರಾಯಣ್ಣ ನುಡಿನಮನ ಕಾರ್ಯಕ್ರಮ ನಾಳೆ

5
ರಾಮದುರ್ಗ ಪಟ್ಟಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಿದ್ದಪ್ಪ ಮಕ್ಕನ್ನವರ ಮಾತನಾಡಿದರು. ಅಶೋಕ ಮೆಟಗುಡ್ಡ, ಮಲ್ಲಪ್ಪ ಸೋಮಗೊಂಡ, ವಿಠ್ಠಲ ಜಟಗನ್ನವರಇತರರಿದ್ದರು.
Published on

ರಾಮದುರ್ಗ: ತಾಲೂಕಿನ ಸಾಲಹಳ್ಳಿಯಲ್ಲಿ ಜ.26 ರಂದು ತಾಲೂಕು ಕುರುಬರ ಸಂಘ ಹಾಗೂ ಹಾಲುಮತ ಸಮಾಜದ ನೇತೃತ್ವದಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ನುಡಿನಮನ ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ಕನಕ ಭವನದಲ್ಲಿ ಬುಧವಾರ ಪೂರ್ವಭಾವಿ ಸಭೆ ಜರುಗಿತು.

ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ ಮಾತನಾಡಿ, ಸಾಲಹಳ್ಳಿ ಗ್ರಾಮದ ಬಬಲಾದೀಶ್ವರ ಮಠದ ಆವರಣದಲ್ಲಿಮದ್ಯಾಹ್ನ 1.30 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕವಲಗುಡ್ಡದ ಸಿದ್ದಯೋಗಿ ಅಮರೇಶ್ವರ ಸ್ವಾಮೀಜಿ, ಕಟಕೋಳ ಸಿದ್ದರಾಯಜ್ಜನವರ ಮಠದ ಅಭಿನವ ಸಿದ್ದರಾಯ ಅಜ್ಜ ಸಾನ್ನಿಧ್ಯ ವಹಿಸುವರು. ಬಿಜೆಪಿ ಮುಖಂಡ ಚಿಕ್ಕರೇವಣ್ಣ ಉದ್ಘಾಟಿಸುವರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶಿಲ್ಪಾ ಕುಂದರಗೊಂಡ ಉಪನ್ಯಾಸ ನೀಡುವರು. ಪ್ರೊ.ವೈ.ವೈ.ಕೊಕ್ಕನವರ, ನಿಂಗಣ್ಣ ಗುಡ್ಡದ ಹಾಗೂ ರಾಗ ರಂಜಿನಿ ಕಲಾ ಬಳಗದವರಿಂದ ರಸಮಂಜರಿ ಜರುಗಲಿದೆ ಎಂದು ತಿಳಿಸಿದರು.

ಕುರುಬರ ಸಂಘದ ರಾಜ್ಯ ಸಮಿತಿ ಮುಖಂಡ ಅಶೋಕ ಮೆಟಗುಡ್ಡ, ಮುಖಂಡರಾದ ಮಲ್ಲಪ್ಪ ಸೋಮಗೊಂಡ, ವಿಠ್ಠಲ ಜಟಗನ್ನವರ, ಸೋಮಶೇಖರ ಸಿದ್ಲಿಂಗಪ್ಪನವರ, ಸಿದ್ದಪ್ಪ ಗಡದಾರ, ರವಿ ಮೊರಬದ, ಬಸವರಾಜ ಕರಿಗಾರ, ಬಸವರಾಜ ಪ್ರಧಾನಿ, ಮಲ್ಲಿಕಾರ್ಜುನ ದುರ್ಗನ್ನವರ ಇತರರಿದ್ದರು. ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಮಕ್ಕನ್ನವರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net