ನೇರಳಕುಪ್ಪೆಯಲ್ಲಿ ರಾಯಣ್ಣ ಜಯಂತಿ ಆಚರಣೆ

1A
ನೇರಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನಿವೃತ್ತ ಗೊಂಡ ಮುಖ್ಯಶಿಕ್ಷಕ ದೊಡ್ಡಸ್ವಾಮಿ ಹಾಗೂ ಸಹಶಿಕ್ಷಕ ಸ್ವಾಮಿ ಅವರನ್ನು ಸಂಗೊಳ್ಳಿ ರಾಯಣ್ಣ ಸೇವಾ ಸಂಘದಿಂದ ಸನ್ಮಾನಿಸಲಾಯಿತು. ಗೀತಾ ಸುರೇಶ, ಗಣಪತಿ ಮಹದೇವ್ ರುಕ್ಷ್ಮೀಣಿ ಸುರೇಶ್ ಇದ್ದರು.
Published on

ಹನಗೋಡು: ಸಮೀಪದ ನೇರಳಕುಪ್ಪೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನೇರಳಕುಪ್ಪೆ ಗ್ರಾ.ಪಂ ಅಧ್ಯಕ್ಷೆ ಗೀತಾ ಸುರೇಶ್ ಮಾತನಾಡಿ, ಕಿತ್ತೂರು ಸಂಸ್ಥಾನದ ರಾಣಿ ಚೆನ್ನಮ್ಮ ಅವರ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರೃಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದರು. ಇಂತಹ ಹೋರಾಟಗಾರರನ್ನು ಸ್ಮರಿಸುವುದರೊಂದಿಗೆ ರಾಯಣ್ಣನಲ್ಲಿದ್ದ ತತ್ವ ಆದರ್ಶಗಳನ್ನು ಇಂದಿನ ಯುವಕರು ಮೈಗೂಡಿಸಿ ಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಗ್ರಾಪಂ ಉಪಾಧ್ಯಕ್ಷೆ ರುಕ್ಮಿಣಿ ಸುರೇಶ್, ತಾ.ಪಂ. ಮಾಜಿ ಸದಸ್ಯ ಕೆ ಗಣಪತಿ, ಗ್ರಾ.ಪಂ. ಸದಸ್ಯರಾದ ಉದಯ್, ಜವರಮ್ಮ ಮುಖಂಡರಾದ ಸಣ್ಣತಮ್ಮೇಗೌಡ, ಲೋಕೇಶ್, ಸುರೇಶ್, ರೇವಣ್ಣ, ಮಲ್ಲೇಶ, ಡೇರಿಗಣೇಶ್, ರಾಜೇಗೌಡ, ಮಹದೇವ್, ರಾಕೇಶ್, ಮನು, ಯೋಗೇಶ, ಪ್ರಮೋದ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಭಾರತಾಂಬೆ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.

ಇದೇ ವೇಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನಿವೃತ್ತ ಗೊಂಡ ಮುಖ್ಯಶಿಕ್ಷಕ ದೊಡ್ಡಸ್ವಾಮಿ ಹಾಗೂ ಸಹಶಿಕ್ಷಕ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ ಅಂಗವಾಗಿ ರಾಯಣ್ಣ ಯುವಕ ಸಂಘದ ವತಿಯಿಂದ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net