ರಾಯನಾಯ್ಕರ ಅಧ್ಯಕ್ಷ, ಹಿರೇಮಠ ಉಪಾಧ್ಯಕ್ಷ

web1
ಇಂಚಲ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರನಾಯ್ಕ ರಾಯನಾಯ್ಕರ ಹಾಗೂ ಉಪಾಧ್ಯಕ್ಷ ಮಹಾಂತೇಶ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಕಾರ್ತಿಕ ಮಲ್ಲೂರ, ಚನ್ನಬಸಪ್ಪ ಪಟ್ಟಣಶೆಟ್ಟಿ, ರೇವಪ್ಪ ಬಾಗೇವಾಡಿ ಇತರರು ಇದ್ದರು.
Published on

ಬೈಲಹೊಂಗಲ: ಸಮೀಪದ ಇಂಚಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಚಂದ್ರನಾಯ್ಕ ರಾಯನಾಯ್ಕರ, ಉಪಾಧ್ಯಕ್ಷರಾಗಿ ಮಹಾಂತೇಶ ಹಿರೇಮಠ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಚಂದ್ರನಾಯ್ಕ ರಾಯನಾಯ್ಕರ ಮಾತನಾಡಿ, ಎಲ್ಲ ಸದಸ್ಯರ ಸಲಹೆ, ಸೂಚನೆ ಪಡೆದು ರೈತರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಗ್ರಾಪಂ ಅಧ್ಯಕ್ಷ ಶಂಕರ ಬಾಗೇವಾಡಿ, ಹಿರಿಯರಾದ ಎಂ.ಎಸ್.ರಾಯನಾಯ್ಕರ, ಬಸನಾಯ್ಕ ಮಲ್ಲೂರ, ರುದ್ರಪ್ಪ ಪಟ್ಟಣಶೆಟ್ಟಿ, ರೇವಪ್ಪ ಮೆಟಗಟ್ಟಿ, ಶಿವರಾಯಪ್ಪ ಸಾವಳಗಿ, ಸಿರಾಜುದ್ದೀನ್ ಮಿರ್ಜನ್ನವರ, ಇಮಾಮಹುಸೇನ್ ನದಾಫ್, ಸಿದ್ದಪ್ಪ ಗೋವನಕೊಪ್ಪ, ಅಶೋಕ ಕರಿಗಾರ, ಶಿವಪ್ಪ ಜಕಾತಿ, ರೇವಪ್ಪ ಜಕಾತಿ,

ಆಡಳಿತ ಮಂಡಳಿ ಸದಸ್ಯರಾದ ಚನ್ನಬಸಪ್ಪ ಪಟ್ಟಣಶೆಟ್ಟಿ, ರೇವಪ್ಪ ಬಾಗೇವಾಡಿ, ಸುರೇಶ ವಾರಿ, ತಾಜುದ್ದೀನ್ ಮಿರ್ಜನ್ನವರ, ರಾಜು ದಿನ್ನಿಮನಿ, ಬಾಯವ್ವ ಮಾರಿಹಾಳ, ಸರೋಜಿನಿ ಗುಡ್ಡದಮ್ಮನವರ, ಶಿವಪ್ಪ ನಾಗಮೇತ್ರಿ, ಸಹದೇವ ತಳವಾರ, ಕಾರ್ತಿಕ ಮಲ್ಲೂರ ಇದ್ದರು. ಚುನಾವಣಾಧಿಕಾರಿಯಾಗಿ ಎಂ.ಎಸ್.ಗೌಡಪ್ಪನವರ, ಸಹಾಯಕರಾಗಿ ಸಂಘದ ಮುಖ್ಯಕಾರ್ಯನಿರ್ವಾಹಕ ಫಕೀರಪ್ಪ ದೇಶನೂರ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net