ರಾಯನಗೌಡರ ಕಾರ್ಯ ಸ್ಮರಣೀಯ

2 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜನಸೇವೆಯಲ್ಲೇ ಸಾರ್ಥಕ ಬದುಕು ಸಾಗಿಸಿದ ದಿ. ತಲ್ಲೂರ ರಾಯನಗೌಡ ಪಾಟೀಲರು ದೇಶದ ಸ್ವಾತಂತ್ರೃ ಹೋರಾಟಕ್ಕೆ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ತ್ಯಾಗಮಯಿ ಎಂದು ಯರಗಟ್ಟಿಯ ಸಾಮಾಜಿಕ ಕಾರ್ಯಕರ್ತ ಅಶೋಕ ಹಾದಿಮನಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ತಲ್ಲೂರ ರಾಯನಗೌಡ ಪಾಟೀಲ ಸ್ಮಾರಕ ಸಂಸ್ಥೆ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ತಲ್ಲೂರು ರಾಯನಗೌಡರ ಸಾಮಾಜಿಕ ಹಾಗೂ ರಾಜಕೀಯ ಮೌಲ್ಯಗಳು ವಿಷಯ ಕುರಿತು ಅವರು ಮಾತನಾಡಿದರು.
ಭವ್ಯ ಭಾರತದ ಉಜ್ವಲ ಕನಸು ಕಂಡ ತಲ್ಲೂರು ರಾಯನಗೌಡ ಅವರದ್ದು ಮೌಲ್ಯಾಧಾರಿತ ಜೀವನ ವಿಧಾನ. ತಮ್ಮ ಘನ ಗಂಭೀರ ನಡೆ-ನುಡಿಯಿಂದ ಜನಮಾನಸದಲ್ಲಿ ಭೌತಿಕವಾಗಿ ಇಲ್ಲದಿದ್ದರೂ ಇನ್ನೂ ಜೀವಂತವಾಗಿದ್ದಾರೆ. ಸಮಾಜದ ಉನ್ನತಿಗೆ ಜೀವನ ಪರ್ಯಂತೆ ದುಡಿದವರು. ಜನಸೇವೆಯೇ ಜನಾರ್ಧನನ ಸೇವೆ ಎಂದು ಬದುಕಿದ ಅವರು ಶರಣ ಸಂಸ್ಕೃತಿಯಂತೆ ಬಾಳಿ ಬದುಕಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ತಲ್ಲೂರ ರಾಯನಗೌಡ್ರು ಸದಾ ಇನ್ನೋರ್ವರ ಏಳ್ಗೆಗೆ ಬಾಳಿದ್ದರಿಂದ ಸಮಾಜದ ದೃಷ್ಟಿಯಲ್ಲಿ ದೊಡ್ಡವರಾಗಿದ್ದಾರೆ. 1960 ಕಾಲಘಟ್ಟದಲ್ಲಿ ರಾಜಕೀಯ ನಾಯಕರಲ್ಲಿದ್ದ ಸಮಾಜಿಕ ಕಳಕಳಿ, ಪ್ರಮಾಣಿಕತೆ, ಸರಳತೆ ನಮಗೆಲ್ಲಾ ಅನುಕರಣೀಯವಾಗಿದೆ ಎಂದರು.
ಶಂಕರ ಕುಂಬಿ, ದತ್ತಿದಾನಿಗಳ ಪರ ಶಂಕರಗೌಡ ಪಾಟೀಲ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಗುರು ಹಿರೇಮಠ, ಶಿವಾನಂದ ಭಾವಿಕಟ್ಟಿ, ಶಂಕರಲಿಂಗ ಶಿವಳ್ಳಿ, ನಿಂಗಣ್ಣ ಕುಂಟಿ, ಸದಾನಂದ ಶಿವಳ್ಳಿ, ಬಿ.ಕೆ. ಹೊಂಗಲ್, ಎಂ.ಬಿ. ನಂದಿಮಠ, ಗಜಾನನ ಚಿನಗುಡಿ, ರಾಮಚಂದ್ರ ಧೊಂಗಡೆ, ಲೋಕೇಶ ಪಾಟೀಲ, ಫಕ್ಕೀರಪ್ಪ ಬೇವಿನಗಿಡದ, ಶಾಂತಮ್ಮ ಪಾಟೀಲ, ಗಿರಿಜಾ ಪಾಟೀಲ, ಇತರರು ಇದ್ದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಡಾ. ಬಾಳಪ್ಪ ಚಿನಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶ್ರೀಶೈಲ ಹುದ್ದಾರ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net