ಶರಣ ಸಂಸ್ಕೃತಿಯಂತೆ ಬಾಳಿದವರು ರಾಯನಗೌಡ್ರು

1 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಲ್ಲೂರ ರಾಯನಗೌಡ್ರು ಪಾಟೀಲ ಮಹಾನ್​ ದೇಶ ಭಕ್ತರು. ಸಮಾಜ ಸೇವೆಯೇ ದೇವರ ಸೇವೆ ಎಂದು ಬಾಳಿದ ಸಾರ್ಥಕ ಜೀವಿಗಳು ಎಂದು ವಿಶ್ರಾಂತ ಪ್ರಾಧ್ಯಾಪಕ ಎನ್​. ಬಿ. ಮಲಕಣ್ಣವರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ತಲ್ಲೂರ ರಾಯನಗೌಡ ಪಾಟೀಲ ಸ್ಮಾರಕ ಸಂಸ್ಥೆಯ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಲ್ಲೂರ ರಾಯನಗೌಡರು ನಡೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿದರು.
ದಿ. ತಲ್ಲೂರ ರಾಯನಗೌಡ್ರು ಪಾಟೀಲರದು ಬಹುಮುಖ ವ್ಯಕ್ತಿತ್ವ, ವಾಸ್ತವಿಕ ಬದುಕು. ಶ್ರೇಷ್ಠ ಕೃಷಿಕರಾದ ಅವರು ಬ್ರಿಟಿಷ ಸರ್ಕಾರದ ಅವಧಿಯಲ್ಲಿ ರೈತರಿಗೆ ವೈಜ್ಞಾನಿಕ ಕೃಷಿ ಉಪಕರಣಗಳ ಬಳಕೆ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತಿದ್ದರು. ಸಹಕಾರ ತತ್ವದಡಿ ಸಹಕಾರಿ ಸಂಘ ಸ್ಥಾಪಿಸಿ ಜನಸೇವೆ ಮಾಡಿದರು. ಅಪ್ಪಟ ಶರಣ ಸಂಸ್ಕೃತಿಯಂತೆ ಬಾಳಿದ ಅವರು ವಿಚಾರದಲ್ಲಿ ಉದಾರತೆ ಕೃತಿಯಲ್ಲಿ ಮಾನವೀಯತೆ ಬೆಳೆಸಿಕೊಂಡು ಸರ್ವ ಧರ್ಮದವರ ಏಳ್ಗೆಗೆ ಶ್ರಮಿಸಿದ ಅವರು ಸಾಹಿತ್ಯಾಸಕ್ತರೂ ಆಗಿದ್ದರು ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ದೇವಿಕಾರಾಣಿ ಪಾಟೀಲ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಬಿ.ಎಲ್​. ಪಾಟೀಲ, ಎಸ್​.ಜಿ. ಪಾಟೀಲ, ಶಂಕರಲಿಂಗ ಶಿವಳ್ಳಿ, ಮನೋಜ ಪಾಟೀಲ, ಗುರು ತಿಗಡಿ, ಗೌರಮ್ಮ ವಾಲಿ, ಶಂಕರಗೌಡ ಪಾಟೀಲ, ಎಂ.ಎಂ. ಚಿಕ್ಕಮಠ, ಬಿ.ಕೆ.ಹೊಂಗಲ, ಡಾ. ಬಾಳಪ್ಪ ಚಿನಗುಡಿ, ಸದಾನಂದ ಶಿವಳ್ಳಿ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net