

ಮಂಗಳೂರು: ‘ರಾಯಲ್ ಟ್ರಾವಂಕೂರ್’ ಹಣಕಾಸು ಸಂಸ್ಥೆಯಿಂದ 60 ಲ.ರೂ.ಗಳಿಗೂ ಅಧಿಕ ಹಣ ವಂಚನೆಯಾಗಿರುವ ಬಗ್ಗೆ ಮಂಗಳೂರು ನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ರಾಯಲ್ ಟ್ರಾವಂಕೂರ್ ಕಂಪೆನಿಯ ನಿರ್ದೇಶಕರಾದ ರಾಹುಲ್ ಚಕ್ರಪಾಣಿ, ಅನಿಲ್ ಚಕ್ರಪಾಣಿ, ಸಿಂಧು ಚಕ್ರಪಾಣಿ ಅವರು ಜ್ಞಾನೇಶ ಮತ್ತು ಇತರ ಸುಮಾರು 600 ಕ್ಕೂ ಅಧಿಕ ಮಂದಿಯನ್ನು ನಂಬಿಸಿ ಮಂಗಳೂರು ಮತ್ತು ತೊಕ್ಕೊಟ್ಟು ಶಾಖೆಯಲ್ಲಿ ಸುಮಾರು 60 ಲ.ರೂ.ಗಳಿಗೂ ಅಧಿಕ ಹಣವನ್ನು ಠೇವಣಿಯಾಗಿ ಸಂಗ್ರಹಿಸಿದ್ದರು. ಹಣಕ್ಕೆ ಪ್ರತಿಫಲವಾಗಿ ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಲಾಭಾಂಶ ಅಥವಾ ಮೂಲ ಬಂಡವಾಳ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.