ಶಾಸಕ ಕಂದಕೂರ ಭೇಟಿ ಮಾಡಿದ ಅಮರೇಶ್ವರ ನಾಯಕ

0604YADAGIRI 05
ಯಾದಗಿರಿಯಲ್ಲಿರುವ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರ ನಿವಾಸಕ್ಕೆ ಭೇಟಿ ನೀಡಿದ ರಾಯಚೂರ ಲೋಕಸಭೆ ಬಿಜೆಪಿ ಅಭ್ಯರ್ಥಿಯಾಗಿರುವ ರಾಜಾ ಅಮರೇಶ್ವರ ನಾಯಕ ಅವರನ್ನು ಸನ್ಮಾನಿಸಲಾಯಿತು.ಜೆಡಿಎಸ್ ಜಿ¯್ಲÁಧ್ಯP್ಷÀ ಚನ್ನಪ್ಪಗೌಡ ಮೊಸಂಬಿ ಇತರರಿದ್ದರು.
Published on

ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ಮೊಟ್ಟ ಮೊದಲ ಸಲ ಭೇಟಿ > ಮೈತ್ರಿ ಧರ್ಮ ಪಾಲನೆಗೆ ಶರಣಗೌಡ ಸಲಹೆ


ವಿಜಯವಾಣಿ ಸುದ್ದಿಜಾಲ ಯಾದಗಿರಿ
ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರ ನಗರದಲ್ಲಿರುವ ನಿವಾಸಕ್ಕೆ ರಾಯಚೂರು ಸಂಸದ ಹಾಗೂ ಬಿಜೆಪಿ ಲೋಕಸಭೆ ಚುನಾವಣೆಯ ಅಭ್ಯರ್ಥಿಯಾಗಿರುವ ರಾಜಾ ಅಮರೇಶ್ವರ ನಾಯಕ ಅವರು ಶನಿವಾರ ಭೇಟಿ ನೀಡಿ ಮಾತುಕತೆ ನಡೆಸಿ ಬೆಂಬಲ ಕೋರಿದರು.
ಲೋಕ ಸಮರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ಮೊಟ್ಟ ಮೊದಲ ಸಲ ರಾಜಾ ಅಮರೇಶ್ವರ ನಾಯಕ ಅವರು ಜೆಡಿಎಸ್ ಶಾಸಕರನ್ನು ಶನಿವಾರ ಭೇಟಿ ಮಾಡಿದರು. ಮೈತ್ರಿಗೆ ಕಂದಕೂರ ಅವರು ಅಸಮಧಾನ ವ್ಯಕ್ತಪಡಿಸಿದ್ದರು.ಹೀಗಾಗಿ ಈ ಭೇಟಿ ಮಹತ್ವ ಪಡೆದುಕೊಂಡಿತ್ತು. ಮೈತ್ರಿ ಧರ್ಮದಂತೆ ಭೇಟಿ ನೀಡಿರುವುದಾಗಿ ಸಂಸದರು ಹೇಳಿಕೊಂಡರು.
ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಾದಗಿರಿ, ಶಹಾಪುರ,ಸುರಪುರ ಕ್ಷೇತ್ರದಲ್ಲಿ ತಮ್ಮನ್ನು ಬೆಂಬಲಿಸುವAತೆ ಕಂದಕೂರ ಅವರಿಗೆ ನಾಯಕ ಮನವಿ ಮಾಡಿದರು. ಈ ವೇಳೆಯಲ್ಲಿ ಜೆಡಿಎಸ್ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಪ್ರಚಾರ ಬ್ಯಾನರ್‌ನಲ್ಲಿ ಮೈತ್ರಿಪಕ್ಷದ ನಾಯಕರ ಪೋಟೋಗಳನ್ನು ಹಾಕಬೇಕು ಎಂದು ಶಾಸಕ ಕಂದಕೂರ ಅವರು ಸಲಹೆ ನೀಡಿದರು.
ಜೆಡಿಎಸ್ ಜಿ¯್ಲÁಧ್ಯP್ಷÀ ಚನ್ನಪ್ಪಗೌಡ ಮೊಸಂಬಿ ಹಾಗೂ ಹಲವು ಮುಖಂಡರ ಜತೆಗೆ ರಾಜಾ ಅಮರೇಶ್ವರ ನಾಯಕ ಅವರು ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ನಾಯಕ ಅವರು, ಇದು ಮೈತ್ರಿ ಧರ್ಮ ಪಾಲನೆ ಮತ್ತು ಸೌಜನ್ಯದ ಭೇಟಿಯಾಗಿದೆ. ಶಾಸಕ ಕಂದಕೂರ ಅವರು ಕೆಲವೊಂದು ಸಲಹೆ ನೀಡಿದ್ದಾರೆ. ಅವನ್ನು ಪಾಲಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net