

ಭದ್ರಾವತಿ: ಇಲ್ಲಿನ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಹಾಗೂ ರಥೋತ್ಸವ ಆ.31ರಿಂದ ಸೆ.2ರವರೆಗೆ ಮೂರು ದಿನಗಳವರೆಗೂ ನಡೆಯಲಿದೆ.
ಗುರುಗಳ ಆರಾಧನಾ ಮಹೋತ್ಸವದ ಅಂಗವಾಗಿ ಮೂರು ದಿನಗಳು ವಿಶೇಷ ಪೂಜೆ, ಭಕ್ತರ ಮನೆಗಳಲ್ಲಿ ಪಾದಪೂಜೆ, ಅಷ್ಟೋತ್ತರ ಪಾರಾಯಣ, ಅರ್ಚನೆ, ಡೋಲೋತ್ಸವ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ತುಲಾಭಾರ ಸೇವೆ ಜರುಗಲಿದೆ.