ರಾಯರ ಆರಾಧನಾ ಮಹೋತ್ಸವ

mantralaya-rayaru
Published on

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಪರಿಮಳ ಮಾರ್ಗದಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಹಾಗೂ ಶ್ರೀಮಠದ ರಜತ ಮಹೋತ್ಸವ ಏರ್ಪಡಿಸಲಾಗಿದೆ.

ಆ. 30ರಂದು ಸಂಜೆ 6.30ರಿಂದ 7.30ರವರೆಗೆ ಪಂ. ಪೂರ್ಣಪ್ರಜ್ಞಾಚಾರ್ಯ ಮಳಗಿ ಅವರಿಂದ ಶ್ರೀ ರಾಘವೇಮದ್ರ ಸ್ವಾಮಿಗಳ ಸ್ತೋತ್ರ ಮಹಿಮೆ ಹಾಗೂ ಸಂದೇಶ ಕುರಿತು ಉಪನ್ಯಾಸ, ಸಂಜೆ 7.30ಕ್ಕೆ ಗೋ ಪೂಜೆ, ಧ್ವಜಪೂಜೆ, ಮನ್ಯು ಪೂಜೆ ಹಾಗೂ ವ್ಯಂಜನ ಭಜನೆ ನಡೆಯಲಿದೆ. 31ರಂದು ಬೆಳಗ್ಗೆ 9ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಸೆ. 1ರಂದು ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net