

ಗೊಳಸಂಗಿ: ಗ್ರಾ.ಪಂ. ಚುನಾವಣೆಗೆ ಕೇವಲ ಒಂದು ವರ್ಷವಷ್ಟೇ ಬಾಕಿ ಉಳಿದಿರುವ ಕಾಲಟ್ಟದಲ್ಲಿ ಸ್ಥಳಿಯ ಗ್ರಾಮ ಪಂಚಾಯತಿ ನೂತನ ಅಧ್ಯರಾಗಿ ರಾವುತ ಈರಪ್ಪ ಸೀಮಿಕೇರಿ ಶುಕ್ರವಾರ ಚುನಾಯಿತರಾದರು.
ಒಟ್ಟು 18 ಸದಸ್ಯ ಬಲವನ್ನು ಹೊಂದಿದ್ದ ಗೊಳಸಂಗಿ ಗ್ರಾಪಂನಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಅಭ್ಯರ್ಥಿಗಳಾಗಿ ರಾವುತ ಈರಪ್ಪ ಸೀಮಿಕೇರಿ ಮತ್ತು ರಾಜೇಸಾಬ ಬಾಷಾಸಾಬ ಹತ್ತರಕಿಹಾಳ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ರಾವುತ ಸೀಮಿಕೇರಿ 13 ಮತ ಗಳಿಸಿ ಜಯಶಾಲಿಯಾದರೆ, ಪ್ರತಿಸ್ಪರ್ಧಿ ರಾಜೇಸಾಬ ಹತ್ತರಕಿಹಾಳ 4 ಮತ ಪಡೆದು ಸೋಲು ಕಂಡರು. ಒಂದು ಮತ ಅಸಿಂಧುವಾಯಿತೆಂದು ತಿಳಿಸಿ ನಿಡಗುಂದಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಚುನಾವಣಾಧಿಕಾರಿ ವೆಂಕಟೇಶ ವಂದಾಲ ಲಿತಾಂಶ ಪ್ರಕಟಿಸಿದರು.
ನಂತರ ರಾವುತ ಸೀಮಿಕೇರಿ ಅವರು ಬೆಂಬಲಿತ ಸದಸ್ಯರು ಮತ್ತು ಅಭಿಮಾನಿಗಳೊಂದಿಗೆ ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಅಭಿಮಾನಿಗಳು ಗುಲಾಲು ಹಚ್ಚಿ, ಪಟಾಕಿ ಸಿಡಿಸಿ ಹಾಗೂ ಗ್ರಾಮದ ಆರಾಧ್ಯ ದೈವ ಬನಶಂಕರಿ ದೇವಿಗೆ 101 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಹರಕೆ ತೀರಿಸಿದರು.
ನಿಕಟಪೂರ್ವ ಅಧ್ಯ ಕೇಶವ ಪವಾರ, ಉಪಾಧ್ಯೆ ಸುಮಿತ್ರಾ ಚಿಮ್ಮಲಗಿ ಹಾಗೂ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಪಿಡಿಒ ಎಂ.ಬಿ. ಹಾವರಗಿ, ಕಾರ್ಯದರ್ಶಿ ಅಶೋಕ ಗಲಗಲಿ ಸಹಾಯಕ ಅಧಿಕಾರಿಯಾಗಿ ಭಾಗಿಯಾಗಿದ್ದರು.