

ಸೋಲಾಪುರ: ಮಹಾರಾಷ್ಟ್ರದ ಗಡಿಯಲ್ಲಿರುವ ಬಿಬಿಐ ಫ್ಯಾಕ್ಟರಿ ಬಳಿ ಎಸೆದ ಕಚ್ಚಾ ಗಿಡಮೂಲಿಕೆ ತಿಂದು 6 ಕುರಿಗಳು ಶನಿವಾರ ಸಾವನ್ನಪ್ಪಿದ್ದು, 60 ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ.
ಸೋಲಾಪುರ ಮೂಲದ ಸಿದ್ದಪ್ಪ ಪೂಜೇರಿ ಹಾಗೂ ಭೀರಪ್ಪ ಪೂಜೇರಿ ಅವರಿಗೆ ಈ ಕುರಿಗಳು ಸೇರಿವೆ. ಸ್ಥಳೀಯರು ಮಾಹಿತಿ ಮೇರೆಗೆ ಕೂಡಲೇ ಪಶುವೈದ್ಯರು ಸ್ಥಳಕ್ಕೆ ಆಗಮಿಸಿ 100ಕ್ಕೂ ಅಧಿಕ ಕುರಿಗಳ ಜೀವ ಉಳಿಸಿದರು.
ಘಟನೆಗೆ ಫ್ಯಾಕ್ಟರಿಗೆ ತಡೆಗೋಡೆ ಇಲ್ಲದಿರುವುದೇ ಕಾರಣವಾಗಿದ್ದು, ಅಲ್ಲಿನ ಸಿಬ್ಬಂದಿಗೆ ತಿಳಿಸಿದರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕುರಿಗಳ ಮಾಲೀಕರು ಆರೋಪಿಸಿದ್ದಾರೆ.