ರೆಡ್‌ಕ್ರಾಸ್ ಅಧ್ಯಕ್ಷರಾಗಿ ರವೀಂದ್ರರೈ ಪುನರಾಯ್ಕೆ

RAVINDRA RAI
Published on

ಮಡಿಕೇರಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಘಟಕದ ಸಭಾಪತಿಯಾಗಿ ಬಿ.ಕೆ.ರವೀಂದ್ರ ರೈ ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.

ನಗರದ ರೆಡ್ ಕ್ರಾಸ್ ಭವನದಲ್ಲಿ ಭಾನುವಾರ ಜರುಗಿದ ವಾರ್ಷಿಕ ಮಹಾಸಭೆ ಸಂದರ್ಭ ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಆಯ್ಕೆ ಜರುಗಿತು. ಈ ಸಂದರ್ಭ ಸಭಾಪತಿಯಾಗಿ ಬಿ.ಕೆ.ರವೀಂದ್ರರೈ, ಉಪಸಭಾಪತಿಯಾಗಿ ಹೆಚ್.ಟಿ.ಅನಿಲ್, ಕಾರ್ಯದರ್ಶಿಯಾಗಿ ಎಂ.ಧನಂಜಯ, ಖಜಾಂಚಿಯಾಗಿ ಪ್ರಸಾದ್ ಗೌಡ, ಸಹಕಾರ್ಯದರ್ಶಿಯಾಗಿ ಕೆ.ಮಧುಕರ್ ಆಯ್ಕೆಯಾಗಿದ್ದಾರೆ.

ರೆಡ್ ಕ್ರಾಸ್ ನಿರ್ದೇಶಕರಾಗಿ ಧೀರ್ಘಕೇಶಿ ಶಿವಣ್ಣ, ಡಾ.ಸಿ.ಆರ್.ಪ್ರಶಾಂತ್, ಎಚ್.ಆರ್.ಮುರಳೀಧರ್, ಪಿ.ಆರ್.ರಾಜೇಶ್, ಕೆ.ಎಂ.ವೆಂಕಟೇಶ್, ಬಿ.ಎನ್. ಪ್ರಕಾಶ್, ಎಸ್.ಸಿ.ಸತೀಶ್, ಜೊಸೇಫ್ ಸ್ಯಾಮ್, ಎ.ಕೆ.ಜೀವನ್, ಬಿ.ಕೆ.ಸತೀಶ್ ರೈ, ಬಿ.ಎನ್.ಧನಂಜಯ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ವಸಂತಕುಮಾರ್, ತೆನ್ನೀರಮೈನಾ, ಕೆ.ಸಿ.ವಸಂತ, ಕೆ.ಟಿ.ಉತ್ತಯ್ಯ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಧಾರವಾಡದಿಂದ ಆಗಮಿಸಿದ್ದ ಕರ್ನಾಟಕ ರಾಜ್ಯ ರೆಡ್ ಕ್ರಾಸ್ ನಿರ್ದೇಶಕ ಮಹಂತೇಶ್ ಕಾರ್ಯನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net