ದೇವರ ಹೆಸರಿನಲ್ಲಿ ರಾಜಕೀಯ ಸಂವಿಧಾನ ವಿರೋಧಿ ಕ್ರಮ ರವೀಂದ್ರ ನಾಯ್ಕ ಟೀಕೆ

19sirsi1 Ravindra naik
Published on

ಶಿರಸಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧರ್ಮ ಮತ್ತು ದೇವರ ಹೆಸರಿನಲ್ಲಿ ರಾಜಕೀಯ ಚಟುವಟಿಕೆ ಆರಂಭಿಸುವುದು ಸಂವಿಧಾನ ವಿರೋಧ ಕ್ರಮವಾಗಿದೆ. ಇಂತಹ ರಾಜಕೀಯ ಪ್ರೇರಿತ ಘಟನೆಗಳನ್ನು ವಿರೋಧಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಭಾರತೀಯ ಸಂವಿಧಾನದ ಅಡಿಯಲ್ಲಿ ಧರ್ಮ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ಮತ್ತು ಚಟುವಟಿಕೆಗಳಿಗೆ ನಿರ್ಬಂಧ ಇದ್ದಾಗಲೂ ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ವಿಷಾದಕರ ಎಂದಿದ್ದಾರೆ.

ಮುಖ್ಯಮಂತ್ರಿ ವಿರುದ್ಧ ಉಪಯೋಗಿಸಿರುವ ಪದಗಳು ಧರ್ಮ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿವೆ. ಸಂಪ್ರದಾಯ ಬದ್ಧ, ಸುಸಂಸ್ಕೃತ, ವೇದ, ಉಪನಿಷತ್ ಮತ್ತು ಸನಾತನ ಧರ್ಮದ ಅನುಯಾಯಿಗಳಾಗಿ ಸಂಸದರು ಆಡಿರುವ ಮಾತುಗಳು ಅವರು ಅನುಸರಿಸುವ ಧರ್ಮಕ್ಕೆ ಅವಮಾನ ಮಾಡಿದಂತಾಗಿದೆ. ಅಸಂವಿಧಾನ ಬದ್ಧ ಮತ್ತು ಅಧರ್ಮದ ಮಾತುಗಳಿಂದ ಸಮಾಜದ ಮೇಲಾಗುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಅವರು ಅನುಸರಿಸುವ ಧರ್ಮ ಪೀಠಗಳು ಅವರಿಗೆ ಕಿವಿಮಾತು ಹೇಳಬೇಕು ಎಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಪೊಲೀಸರು ವಿಫಲ: ಇತ್ತೀಚಿನ ದಿನಗಳಲ್ಲಿ ಅಸಂವಿಧಾನ ಬದ್ಧ, ಪ್ರಚೋದಿತ ಬಾಷಣದ ಮೂಲಕ ಕಾನೂನು ಉಲ್ಲಂಘಿಸಿರುವ ಲೋಕಸಭಾ ಸದಸ್ಯ ಅನಂತ ಕುಮಾರ ಹೆಗಡೆ ವಿರುದ್ಧ ಸೂಕ್ತ ಕ್ರಮ ಜರುಗಿಸುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ರವೀಂದ್ರ ನಾಯ್ಕ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net