ರವಿಕುಮಾರ್ ಬಿ.ಗೌಡಯ್ಯ ನಾಮಪತ್ರ ಸಲ್ಲಿಕೆ

namapathra
Published on

ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ೨೦೨೫-೨೦೩೦ ವರೆಗಿನ ಆಡಳಿತ ಮಂಡಳಿಗೆ ಜ.೫ ರಂದು ನಡೆಯುವ ಚುನಾವಣೆಗೆ ಸಾಮಾನ್ಯ ಸಾಲಗಾರರ ಹಿಂದುಳಿದ ವರ್ಗ(ಪ್ರವರ್ಗ ಬಿ) ಕ್ಷೇತ್ರದಿಂದ ರವಿಕುಮಾರ್ ಬಿ.ಗೌಡಯ್ಯ ಗುಮ್ಮನಕೊಲ್ಲಿ ವಿವಿಧ ಪಕ್ಷದ ಮುಖಂಡರು ಹಾಗೂ ತಮ್ಮ ಬೆಂಬಲಿಗರ ಜೊತೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿ, ಸಂಘದ ಉನ್ನತಿಗಾಗಿ ಮತ್ತು ರೈತ ಭಾಂದವರಿಗೆ ಹಾಗೂ ಸಂಘದ ಇತರ ಎಲ್ಲಾ ಸದಸ್ಯರುಗಳಿಗೂ ಸಂಘದ ವತಿಯಿಂದ ದೊರೆಯುವ ಎಲ್ಲಾ ರೀತಿಯ ಸಹಾಯ ಸೌಲಭ್ಯಗಳನ್ನು ದೊರಕಿಸಿಕೊಡಲು ಮತ್ತು ರೈತರ ಹಿತಶಕ್ತಿ, ಕುಂದು ಕೊರತೆ, ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿ ಪರಿಹಾರ ರೂಪಿಸುವ ಯತ್ನವನ್ನು ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ವಿಕ್ಟರ್ ಸೋನ್ಸ್, ಬಿಜೆಪಿ ಮುಖಂಡ ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಆಸಿಫ್ ಸಿ.ಎಂ.ಮಾತನಾಡಿದರು. ಚುನಾವಣಾ ಅಧಿಕಾರಿ ರವಿಕಾಂತ್ ನಾಮ ಪತ್ರವನ್ನು ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net