ಕರಾಟೆಯಲ್ಲಿ ಚಿನ್ನ ಪಡೆದ ರವಿ

04 06 2025_BGR RURAL_PAGE_8B
ಕರಾಟೆ ಪಂದ್ಯಾವಳಿಯಲ್ಲಿ ಚಿನ್ನ, ಬೆಳ್ಳಿ ಪದಕ ಹಾಗೂ ಟ್ರೋಫಿ ಪಡೆದ ವಿದ್ಯಾರ್ಥಿ ರವಿ ಮತ್ತು ತರಬೇತಿ ಶಿಕ್ಷಕ ರು ಜತೆ ಕರಾಟೆ ಮಾಸ್ಟರ್​ ಚಂಗಪ್ಪ ಅವರನ್ನು ಶಾಲಾ ಕಾರ್ಯದರ್ಶಿ ಡಿಎಸ್​.ಧನಂಜಯ್​ ಸನ್ಮಾನಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಶೈಲಜಾ ಧನಂಜಯ್​, ಸಹಶಿಕ್ಷಕರಾದ ಕೆ.ನಿಜಲಿಂಗಪ್ಪ, ಬಿ.ಎಸ್​.ಮಂಜು ಇತರರು ಇದ್ದರು.
Published on

ದೇವನಹಳ್ಳಿ : ಅಂತಾರಾಷ್ಟ್ರೀಯ ಮಾರ್ಷಲ್​ ಆರ್ಟ್ಸ್​ನಿಂದ ಶ್ರೀಲಂಕಾದಲ್ಲಿ ನಡೆದ ಮೂರನೇ ಮುಕ್ತ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾರತ ಪ್ರತಿನಿಧಿಸಿದ್ದ ದೇವನಹಳ್ಳಿಯ ಎಸ್​ಎಲ್​ಎಸ್​ ಶಾಲೆಯ ವಿದ್ಯಾರ್ಥಿ ರವಿ ಬಿ ತಲವಾರ್​ ಮತ್ತು ತರಬೇತು ಶಿಕ್ಷಕರು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ 3 ಚಿನ್ನ, ಒಂದು ಬೆಳ್ಳಿ ಪದಕ ಗಳಿಸಿ ಕೀರ್ತಿ ತಂದಿದ್ದಾರೆ. ಉಜುಕಿಸ್ಥಾನ, ತಜುಕಿಸ್ತಾನ, ಹಂಗೇರಿ, ಕುವೈತ್​, ಉಕ್ರೇನ್​ ಸೇರಿ 12 ರಾಷ್ಟ್ರಗಳ ಕರಾಟೆ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದರು.

ಪಟ್ಟಣದ ಎಸ್​ಎಲ್​ಎಸ್​ ಶಾಲೆಯಲ್ಲಿ ವಿಜೇತ ವಿದ್ಯಾರ್ಥಿಗೆ ಸನ್ಮಾನಿಸಿ ಮಾತನಾಡಿದ ಕರಾಟೆ ಗ್ರಾಂಡ್​ ಮಾಸ್ಟರ್​ ಚಂಗಪ್ಪ, ಕರಾಟೆ ಆತ್ಮರಕ್ಷಣೆಯ ಕಲೆಯಾಗಿದ್ದು, ಇದು ಹೆಣ್ಣು ಮಕ್ಕಳಿಗೆ ಬಹಳ ಉಪಯೋಗವಾಗಲಿದೆ. ಒಂಟಿಯಾಗಿರುವಾಗ ತಕ್ಷಣ ಎದುರಾಗುವ ಅಪಾಯದಿಂದ ಪಾರಾಗಲು ಸಹಕಾರಿಯಾಗಿದೆ ಎಂದರು.

ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಡಾ.ಡಿ.ಎಸ್​.ಧನಂಜಯ ಮಾತನಾಡಿ, ಶಾಲೆಯಲ್ಲಿ ಶಿಕ್ಷಣದ ಜತೆಗೆ ಕಳೆದ 23 ವರ್ಷಗಳಿಂದ ಕರಾಟೆ ತರಬೇತಿ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net