

ಬೈಲಹೊಂಗಲ: ವಿಜಯಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಕೀಲ ರವಿ ಮೇಲಿನಕೇರಿ ಮೇಲೆ ನಡೆದಿರುವ ಹತ್ಯೆ ಖಂಡನೀಯವಾಗಿದ್ದು, ಹತ್ಯೆಗೈದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ವಕೀಲರ ಸಂಘದ ಸದಸ್ಯರು ಸೋಮವಾರ ಕಲಾಪದಿಂದ ದೂರ ಉಳಿದು ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನ್ಯಾಯವಾದಿಗಳ ಸಂದ ಅಧ್ಯಕ್ಷ ಎಂ.ಆರ್. ಮೆಳವಂಕಿ, ರಾಜ್ಯ ನೋಟರಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಿಕ್ಕನಗೌಡರ ಮಾತನಾಡಿ, ವಿಜಯಪುರ ವಕೀಲ ರವಿ ಮೇಲಿನಕೇರಿ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹತ್ತಿಸಿ ದುಷ್ಕರ್ಮಿಗಳು ಪ್ರಾಣ ಹೋಗುವವರೆಗೂ ಎಳೆದುಕೊಂಡು ಹೋಗಿದ್ದಾರೆ. ಪೊಲೀಸರು ಆರೋಪಿತರ ವಿರುದ್ಧ ನೆಪಮಾತ್ರಕ್ಕೆ ಅಪಘಾತ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ವಕೀಲರ ಸಂದ ಪ್ರಧಾನ ಕಾರ್ಯದರ್ಶಿ ವಿ.ಜಿ. ಕಟದಾಳ, ಎಂ.ವೈ. ಸೋಮನ್ನವರ, ಡಿ.ವೈ. ಗರಗದ, ಎಸ್.ವಿ. ಸಿದ್ದಮನಿ, ಎ. ಜಿ. ಕರಬನ್ನವರ, ವಿ.ಸಿ. ಸಂಗೊಳ್ಳಿ, ಐ.ಬಿ.ಸಾಲಿ, ಎಸ್.ಪಿ. ಕುಲಕರ್ಣಿ, ಎಸ್.ಎಚ್.ನದ್ಾ, ಎನ್.ಕೆ.ಮೆಳ್ಳಿಕೇರಿ, ಬಿ.ಬಿ.ಹುಲಮನಿ, ಕೆ.ಎಸ್. ಕುಲಕರ್ಣಿ, ಎಂ.ಎಂ.ಅಲ್ಲಯ್ಯನವರಮಠ, ಬಿ.ಎಸ್.ಬೈಲವಾಡ, ಬಸವರಾಜ ಅಂಬೋಜಿ ಇತರರಿದ್ದರು.