ಇಂದಾವರ ರವಿಗೆ ಪಿಎಚ್‌ಡಿ ಪದವಿ

17 ckm 7 RAVI
ರವಿ
Published on

ಚಿಕ್ಕಮಗಳೂರು: ತಾಲೂಕಿನ ಇಂದಾವರ ಗ್ರಾಮದ ರವಿ ಐ.ಎ. ಅವರು ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಬೆಳಗಾವಿ ತಾಂತ್ರಿಕ ಮಹಾವಿದ್ಯಾಲಯದಿಂದ ಪಿಎಚ್‌ಡಿ ಪದವಿ ಲಭಿಸಿದೆ.

ಇಂಪ್ಯಾಕ್ಟ್ ಆಫ್ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಆನ್ ಕನ್ಸೂಮರ್ ಪರ್ಚೇಸ್ ಇಂಟೆನ್ಷನ್ ವಿಥ್ ರೆಫರೆನ್ಸ್ ಟು ಹಾಸ್ಪಿಟಲಿಟಿ ಇಂಡಸ್ಟ್ರಿ ಇನ್ ಕರ್ನಾಟಕ ವಿಷಯದ ಕುರಿತು ಡಾ. ಜಿ.ಎಂ.ಸುದರ್ಶನ್ ಮಾರ್ಗದರ್ಶನದಲ್ಲಿ ಪ್ರೌಢ ಪ್ರಬಂಧವನ್ನು ಸಲ್ಲಿಸಿದ್ದರು.
ಮೂಲತಃ ಇಂದಾವರ ಗ್ರಾಮದ ಇವರು ಅಣ್ಣೇಗೌಡ ಮತ್ತು ಲಲಿತಮ್ಮ ಅವರ ಪುತ್ರರಾದ ರವಿ ಪ್ರಸ್ತುತ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net