'ಅರೆಬೆತ್ತಲೆ ಮೆರವಣಿಗೆ ಹಾಸ್ಯಾಸ್ಪದ'

RAVI
Published on

ಮಡಿಕೇರಿ:

ಹಲವು ಹಗರಣಗಳ ಆರೋಪ ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪರ ದಲಿತ ಸಂಘರ್ಷ ಸಮಿತಿಯ ಹೆಸರಿನಲ್ಲಿ ಕೆಲವರು ನಡೆಸಿರುವ ಅರೆಬೆತ್ತಲೆ ಪ್ರತಿಭಟನೆ ಹಾಸ್ಯಾಸ್ಪದ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ. ರವಿ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದಲ್ಲಿ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದವರು ಕಾಂಗ್ರೆಸ್ ಪಕ್ಷದ ಅಂಗಸAಸ್ಥೆಗೆ ಸೇರಿದವರಂತೆ ವರ್ತಿಸಿ ಪರಿಶಿಷ್ಟರ ಹಾದಿ ತಪ್ಪಿಸುವ ಯತ್ನ ಮಾಡಿದ್ದಾರೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದಿಂದ ಪರಿಶಿಷ್ಟರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಇತ್ತೀಚೆಗೆ ಬಯಲಿಗೆ ಬಂದಿರುವ ಹಗರಣಗಳೇ ಸಾಕ್ಷಿ ಹೇಳುತ್ತಿವೆ. ಪರಿಶಿಷ್ಟರ ಅಭ್ಯುದಯಕ್ಕಾಗಿ ಮೀಸಲಿಟ್ಟ ಸಾವಿರಾರು ಕೋಟಿ ರೂ. ಅನುದಾನ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ ಪರಿಶಿಷ್ಟರ ಅನುದಾನ ದುರುಪಯೋಗವಾಗಿದೆ, ಮುಡಾ ಜಾಗ ನಿಯಮ ಬಾಹಿರವಾಗಿ ಮಂಜೂರಾಗಿದೆ. ಪರಿಶಿಷ್ಟರ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಇದೆಲ್ಲವನ್ನು ಮುಂದಿಟ್ಟುಕೊAಡು ಪರಿಶಿಷ್ಟರ ಪರವಾಗಿ ಬಿಜೆಪಿ ನಿರಂತರವಾಗಿ ಹೋರಾಟವನ್ನು ನಡೆಸುತ್ತಾ ಬರುತ್ತಿದೆ. ಆದರೆ ಕೆಲವರು ವಿನಾಕಾರಣ ಅರೆಬೆತ್ತಲೆ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರ ಮತ್ತಷ್ಟು ಹಗರಣಗಳನ್ನು ನಡೆಸಲು ಪ್ರೇರಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ದುರಾಡಳಿತ ಸಹಿಸದೆ ಡಾ.ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಚುನಾವಣೆಯನ್ನು ಎದುರಿಸಿದರು. ಅಂಬೇಡ್ಕರ್ ಅವರನ್ನು ಕುತಂತ್ರದಿAದ ಎರಡು ಬಾರಿ ಕಾಂಗ್ರೆಸ್ ಪಕ್ಷವೇ ಸೋಲಿಸಿತು. ಅಂತಿಮ ಸಂಸ್ಕಾರದ ಸಂದರ್ಭವೂ ಅವಮಾನಿಸಲಾಯಿತು. ಪರಿಶಿಷ್ಟ ಸಮುದಾಯದವರು ಹಾಗೂ ಸಂಘಟನೆಗಳು ಮೊದಲು ಈ ಸತ್ಯಗಳನ್ನು ಅರಿತುಕೊಳ್ಳಬೇಕು. ಶೋಷಿತರ ಏಳಿಗೆಗಾಗಿ ಸಂಘಟನೆಗಳು ಹೋರಾಟಗಳನ್ನು ರೂಪಿಸಬೇಕೇ ಹೊರತೂ ಭ್ರಷ್ಟ ಸರ್ಕಾರದ ಅಂಗಸAಸ್ಥೆಯAತೆ ವರ್ತಿಸಬಾರದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net