ರಾವಸಾಹೇಬ ಪಾಟೀಲ ಸಮಾಜಸೇವೆ ಶ್ಲಾಘನೀಯ

29BRG1-Web
ದುಧಗಾಂವ ಗ್ರಾಮದಲ್ಲಿ ರಾವಸಾಹೇಬ ಪಾಟೀಲ ಅವರಿಗೆ ವೀರಸೇವಾದಲ ಮಧ್ಯವರ್ತಿ ಸಮಿತಿ ವತಿಯಿಂದ ದಾನಚಿಂತಾಮಣಿ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಜು ಶೆಟ್ಟಿ, ಮೀನಾಕ್ಷಿ ಪಾಟೀಲ, ರಾವಸಾಹೇಬ ಜಿ.ಪಾಟೀಲ,ದತ್ತಾ ಡೋರ್ಲೆ, ಬಾಲಚಂದ್ರ ಪಾಟೀಲ, ಶಶಿಕಾಂತ ರಾಜೋಬಾ, ಭೂಪಾಲ ಗಿರಮಲ ಇದ್ದರು.
Published on

ಬೋರಗಾಂವ : ದಕ್ಷಿಣ ಭಾರತ ಜೈನಸಭಾ ಅಧ್ಯಕ್ಷ, ಅರಿಹಂತ ಉದ್ಯೋಗ ಸಮೂಹ ರೂವಾರಿ ರಾವಸಾಹೇಬ ಪಾಟೀಲ ಅವರಿಗೆ ವೀರಸೇವಾದಲ ಮಧ್ಯವರ್ತಿ ಸಮಿತಿ ವತಿಯಿಂದ ಇತ್ತೀಚೆಗೆ ದಾನಚಿಂತಾಮಣಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮೀಪದ ದುಧಗಾಂವ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ವೀರಸೇವಾದಲ ಮಧ್ಯವರ್ತಿ ಸಮಿತಿಯ 42ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ.ಪೂ.ಪಾವನಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಮಾಜಿ ಸಂಸದ ರಾಜು ಶೆಟ್ಟಿ ಹಾಗೂ ಶ್ರೀಧರ ಹೆರವಾಡೆ ಪುರಸ್ಕಾರ ನೀಡಿದರು. ವೀರಸೇವಾದಲ ಮಧ್ಯವರ್ತಿ ಸಮಿತಿ ಅಧ್ಯಕ್ಷ ಶಶಿಕಾಂತ ರಾಜೋಬಾ ಮಾತನಾಡಿ, ರಾವಸಾಹೇಬ ಪಾಟೀಲ ಅವರ ಸಾಮಾಜಿಕ ಸೇವೆ ಪರಿಗಣಿಸಿ ಪುರಸ್ಕಾರ ನೀಡಲಾಗಿದೆ ಎಂದರು. ರಾವಸಾಹೇಬ ಪಾಟೀಲ ಮಾತನಾಡಿ ಅವರು, ಉತ್ತಮ ಸಮಾಜ ನಿರ್ಮಿಸಲು ಯುವಕರಿಗೆ ಸಾಮಾಜಿಕ ಕಾರ್ಯದ ವೇದಿಕೆ ಕಲ್ಪಿಸಿ ಕೊಡಬೇಕು ಎಂದರು. ಮೀನಾಕ್ಷಿ ಪಾಟೀಲ, ರಾಜು ಶೆಟ್ಟಿ, ರಾವಸಾಹೇಬ ಜಿ. ಪಾಟೀಲ, ದತ್ತಾ ಡೋರ್ಲೆ, ಬಾಲಚಂದ್ರ ಪಾಟೀಲ, ಶಶಿಕಾಂತ ರಾಜೋಬಾ, ಭೂಪಾಲ ಗಿರಮಲ, ಅಜಿತ ಪಾಟೀಲ, ವಿನಯಶ್ರೀ ಪಾಟೀಲ, ಡಿ.ಕೆ.ಪಾಟೀಲ, ರಾಜೇಂದ್ರ ಪಾಟೀಲ, ಅಭಯಕುಮಾರ ಕರೋಲೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net